ಕರ್ನಾಟಕ ಉಪಚುನಾವಣೆ: ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಜೆಡಿಎಸ್

ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಚುನಾವಣೆ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು, ಅಕ್ಟೋಬರ್ 24 ನಂತರ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳಲಿೆದೆ ಎಂದು ಜೆಡಿಎಸ್ ಶನಿವಾರ ಹೇಳಿದೆ. 

Published: 22nd September 2019 10:01 AM  |   Last Updated: 22nd September 2019 10:01 AM   |  A+A-


HDK

ಕುಮಾರಸ್ವಾಮಿ

Posted By : Manjula VN
Source : The New Indian Express

ಮೈಸೂರು: ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಚುನಾವಣೆ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು, ಅಕ್ಟೋಬರ್ 24 ನಂತರ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳಲಿೆದೆ ಎಂದು ಜೆಡಿಎಸ್ ಶನಿವಾರ ಹೇಳಿದೆ. 

ಉಪಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಇನ್ನೂ ಅಲ್ಪಸಂಖ್ಯೆಯಲ್ಲಿಯೇ ಇದೆ. ಸ್ಥಿರ ಸರ್ಕಾರಕ್ಕೆ ಅವರ ಬಳಿ ಸಂಖ್ಯೆಗಳಿಲ್ಲ. ರೈತರ ಪರವಾಗಿರುವ ಸರ್ಕಾರ ಕಚೇರಿಯಲ್ಲಿಯೇ ಇರುವುದಿಲ್ಲ ಎಂದು ಹೇಳಿದ್ದಾರೆ. 

ಕೋಡಿ ಮಠದ ಶ್ರೀಗಳ ಊಹೆಯಂತೆ ನಾನು ಸರ್ಕಾರ ಪತನಗೊಳ್ಳುತ್ತಿದೆ ಎಂದು ಹೇಳುತ್ತಿಲ್ಲ. ನನ್ನ ಸ್ವಂತ ಲೆಕ್ಕಾಚಾರದಲ್ಲಿ ಇದನ್ನು ಹೇಳುತ್ತಿದ್ದೇನೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇನ್ನು ಮೂರು ತಿಂಗಳು ಕೂಡ ಇರುವುದಿಲ್ಲ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರ ಬಗ್ಗೆ ನಾನು ಮಾತುನಾಡುತ್ತಿಲ್ಲ. ಕಾಂಗ್ರೆಸ್ ನಾಯಕರಲ್ಲಿ ಕೆಲವರು ಜೆಡಿಎಸ್ ಮುಗಿಸಲು ನಿಂತಿದ್ದಾರೆ. 

ಕಳೆದ ಬಾರಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ ಕಾಂಗ್ರೆಸ್ ಜೆಡಿಎಸ್ ಸೇರಿ ಸರ್ಕಾರ ಮಾಡಿದೆವು. ಆದರೆ, ಕಾಂಗ್ರೆಸ್ ಪಕ್ಷದಿಂದ ನನಗೆ ಸರಿಯಾಗಿ ಬೆಂಬಲ ಸಿಗಲಿಲ್ಲವಾದ್ದರಿಂದ ನಾನು ಕೆಟ್ಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದೆ. ಮೈಸೂರು ಭಾಗದ ನಾಯಕರೊಬ್ಬರು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಸಾಲ ಮನ್ನಾ ಹೇಗೆ ಮಾಡುತ್ತೀರಿ ಎಂದು ಪದೇ ಪದೆ ಹೇಳಿದ್ದರು. ಆದರೆ, ನಾನು ಸ್ವತಂತ್ರವಾಗಿ ಅಧಿಕಾರವಿಲ್ಲದಿದ್ದರೂ, ಸಾಲಮನ್ನಾ ಮಾಡಿ ತೋರಿಸಿದೆ ಎಂದು ಸಿದ್ದರಾಮಯ್ಯ ಅವರ ಹೆಸರು ಎತ್ತದೆಯೇ ಟಾಂಗ್ ನೀಡಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp