ದೀಪದ ಬೆಳಕಿನ ಶಾಖಕ್ಕೆ ಕೊರೋನಾ ವೈರಸ್ ಸಾಯುತ್ತೆ: ವೈರಲ್ ಆಯ್ತು ಮಾಜಿ ಆರೋಗ್ಯ ಸಚಿವರ ಹೇಳಿಕೆ

ದೀಪ ಹಚ್ಚುವುದರಿಂದ ಬೆಳಕಿನ ಶಾಖಕ್ಕೆ ಕೊರೋನಾ ವೈರಸ್ ಸಾಯುತ್ತೆ ಎಂಬ ಬಿಜೆಪಿ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವರ ಹೇಳಿಕೆಯೊಂದು ಇದೀಗ ವೈರಲ್ ಆಗುತ್ತಿದ್ದು, ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ. 
ರಾಮದಾಸ್
ರಾಮದಾಸ್

ಮೈಸೂರು: ದೀಪ ಹಚ್ಚುವುದರಿಂದ ಬೆಳಕಿನ ಶಾಖಕ್ಕೆ ಕೊರೋನಾ ವೈರಸ್ ಸಾಯುತ್ತೆ ಎಂಬ ಬಿಜೆಪಿ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವರ ಹೇಳಿಕೆಯೊಂದು ಇದೀಗ ವೈರಲ್ ಆಗುತ್ತಿದ್ದು, ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದೆ. 

ಕೆ.ಆರ್.ಕ್ಷೇತ್ರದ ವಿವಿಧೆಡೆ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಮೊಂಬತ್ತಿ, ದೀಪಗಳನ್ನು ವಿತರಿಸಿ ಮಾತನಾಡಿರುವ ಮಾಜಿ ಆರೋಗ್ಯ ಸಚಿವ ಎಸ್.ಎ.ರಾಮದಾಸ್ ಅವರು, ಮೋದಿಯವರ ದೀಪ ಬೆಳಗುವ ಕರೆಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಅದಕ್ಕಾಗಿಯೇ ದೀಪ ಹಚ್ಚಲು ದೇಶದಾದ್ಯಂತ ಕರೆ ನೀಡಿದ್ದಾರೆ. ವೈರಸ್ ಎಲ್ಲಿಯೇ ಇರಲಿ ನಿಮ್ಮ ಮನೆಯೊಳಗೇ ಇರಲಿ ದೀಪದ ಬೆಳಕಿಗೆ ಆಕರ್ಷಕ್ಕೊಳಗಾಗಿ, ಬೆಳಕಿಗಾಗಿ ಬರುತ್ತದೆ. ಆ ಬೆಳಕಿನ ಶಾಖದಿಂದ ವೈರಸ್ ಸಾಯುತ್ತದೆ. ವೈರಸ್ ಮನೆಯೊಳಗೆ ಇದ್ದಿದ್ದೇ ಆದರೆ, ಅದು ತನ್ನ ಸಾವನ್ನು ತಾನೇ ಕಾಣಬೇಕು. ಬೆಳಕಿನ ಮೂಲಕ ವೈರಸ್ ಕತ್ತಲೆಯಲ್ಲಿ ಇರುವುದಿಲ್ಲ. ಅದು ಬೆಳಕಿನ ಜಾಗಕ್ಕೆ ಬಂದು ಸಾಯುತ್ತೆ ಎಂಬ ವೈಜ್ಞಾನಿಕ ಕಾರಣ ಇದೆ ಎಂದು ಹೇಳಿದ್ದಾರೆ. 

ವೈರಸ್ ತಡೆಗಟ್ಟಲು ಪ್ರಧಾನಿ ಮೋದಿಯವರು ಏ.5ರಂದು ದೀಪ ಹಚ್ಚುವಂತೆ ಕರೆ ನೀಡಿದ್ದು, ಭಾನುಾರ ರಾತ್ರಿ ನಿಮ್ಮ ಮನೆಯ ಲೈಟ್ ಆಫ್ ಮಾಡಿ ಮುಂಭಾಗದ ಬಾಲ್ಕನಿಯಲ್ಲಿ ದೀಪ ಹಚ್ಚಿ ನಿಂತುಕೊಳ್ಳಿ. ಮೋದಿಯವರ ಮಾತಿನಂತೆ ನಾವು ನಡೆದುಕೊಳ್ಳೋಣ. ದೀಪ ಶಾಂತಿಯ ಸಂಕೇತ. ಹಾಗಾಗಿ ದೇಶ ಶಾಂತಿಯಿಂದ ಕೂಡಿರಬೇಕೆಂದು ತಿಳಿಸಿದ್ದಾರೆ. 

ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ. ಆಲ್ಲದೆ, ರಾಮದಾಸ್ ಅವರ ಈ ಹೇಳಿಕೆ ವಿರುದ್ಧ ಹಲವು ಟೀಕೆಗಳೂ ವ್ಯಕ್ತವಾಗುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com