ನಿಷೇಧಾಜ್ಞೆ ಉಲ್ಲಂಘನೆ: 15 ಜನರ ಮೇಲೆ ದೂರು ದಾಖಲು

ದೇಶದಲ್ಲಿ ಲಾಕ್ ಡೌನ್ ಮತ್ತು ಜಿಲ್ಲೆಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ನಗರದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು 15 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘನೆ: 15 ಜನರ ಮೇಲೆ ದೂರು ದಾಖಲು
ನಿಷೇಧಾಜ್ಞೆ ಉಲ್ಲಂಘನೆ: 15 ಜನರ ಮೇಲೆ ದೂರು ದಾಖಲು
Updated on: 

ಗಂಗಾವತಿ: ದೇಶದಲ್ಲಿ ಲಾಕ್ ಡೌನ್ ಮತ್ತು ಜಿಲ್ಲೆಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ನಗರದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು 15 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ನಗರದ ಲಿಂಗರಾಜ ಕ್ಯಾಂಪಿನ ಇಲಾಹಿ ಕಾಲೋನಿಯಲ್ಲಿರುವ ಅಕ್ಸಾ ಮಸೀದಿಯಲ್ಲಿ ಸಕರ್ಾರದ ಆದೇಶ ಉಲ್ಲಂಘಿಸಿ ಪ್ರಾರ್ಥನೆಯಲ್ಲಿದ್ದ ಮೈನುದ್ದೀನ್, ಜಹೀರ್ ಅಬ್ಬಾಸ್, ಶೇಖ್ ಅನ್ವರ್, ಉಸ್ಮಾನಸಾಬ ಸಂಪಂಗಿ ಹಾಗೂ ಪಂಕ್ಚರ್ ಹುಸೇನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಇತರೆ ಹತ್ತು ಜನ ಆರೋಪಿಗಳು ಪರಾರಿಯಾಗಿದ್ದಾರೆ. ಕೊರೊನಾ ವೈರಸ್ ಹರಡುವಿಕೆಯ ಭೀತಿಯಿಂದ ಕೇಂದ್ರ ಸಕರ್ಾರ ಜಾರಿ ಮಾಡಿದ್ದ ಲಾಕ್ ಡೌನ್, ಕೊಪ್ಪಳ ಜಿಲ್ಲಾಧಿಕಾರಿ ಜಾರಿ ಮಾಡಿದ್ದ ನಿಷೇಧಾಜ್ಞೆ ಉಲ್ಲಂಘನೆ ಹಾಗೂ ವಕ್ಫ್ ಮಂಡಳಿ ಜಾರಿ ಮಾಡಿದ್ದ ಸಾಮೂಹಿಕ ನಮಾಜ್ ನಿಷೇಧ ಉಲ್ಲಂಘಿಸಿದ್ದಕ್ಕೆ ಆರೋಪಿಗಳ ಮೇಲೆ ದೂರು ದಾಖಲಾಗಿದೆ. 

ವರದಿ: ಎಂ ಜೆ ಶ್ರೀನಿವಾಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com