ವಸತಿ ಸೌಲಭ್ಯ ಪರೀಶೀಲನೆಗೆ ವಲಸಿಗ ಕಾರ್ಮಿಕರ ಶಿಬಿರಗಳಿಗೆ ಭೇಟಿ ನೀಡಿ: ರಾಜ್ಯ ಸರ್ಕಾರಕ್ಕೆ 'ಹೈ' ಆದೇಶ

ರಾಜ್ಯದಲ್ಲಿ ವಲಸೆ ಹೋಗುವ ಕಾರ್ಮಿಕರ ವಸತಿ, ಸೌಲಭ್ಯಕ್ಕಾಗಿ ಸ್ಥಾಪಿಸಲಾಗಿರುವ ಶಿಬಿರಗಳ ಎಲ್ಲಾ ವಿವರಗಳನ್ನು ಆಯಾ ಜಿಲ್ಲಾ ಕಾನೂನು ಸೇವೆಗಲ ಪ್ರಾಧಿಕಾರಗಳ ಕಾರ್ಯದರ್ಶಿಗಳಿಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶನಿವಾರ ಆದೇಶಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವಲಸೆ ಹೋಗುವ ಕಾರ್ಮಿಕರ ವಸತಿ, ಸೌಲಭ್ಯಕ್ಕಾಗಿ ಸ್ಥಾಪಿಸಲಾಗಿರುವ ಶಿಬಿರಗಳ ಎಲ್ಲಾ ವಿವರಗಳನ್ನು ಆಯಾ ಜಿಲ್ಲಾ ಕಾನೂನು ಸೇವೆಗಲ ಪ್ರಾಧಿಕಾರಗಳ ಕಾರ್ಯದರ್ಶಿಗಳಿಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶನಿವಾರ ಆದೇಶಿಸಿದೆ. 

ವಸಲೆ ಕಾರ್ಮಿಕರ ಕುರಿತಂತೆ ಪಿಯುಸಿಎಲ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ ಅವರಿದ್ದ ಪೀಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಅಥವಾ ವಲಸೆ ಕಾರ್ಮಿಕರ ಪರವಾಗಿ ಸ್ವಯಂಸೇವಕರಾಗಿ ಕೆಲಸ ಮಾಡುವವರ ವಲಸೆ ಕಾರ್ಮಿಕರ ವಸತಿಗಾಗಿ ಸ್ಥಾಪಿಸಲಾಗಿರುವ ಶಿಬಿಗಳಿಗೆ ಭೇಟಿ ನೀಡಿ, ಅವರಿಗೆ ನೀಡುತ್ತಿರುವ ಮೂಲಭೂತ ಸೌಲಭ್ಯಗಳ ಕುರಿತ ಮಾಹಿತಿನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಲ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ನೀಡಬೇಕು. ಮುಂದಿನ ವಿಚಾರಣೆ ವೇಳೆ ಈ ಎಲ್ಲಾ ಮಾಹಿತಿಗಳನ್ನು ಪ್ರಾಧಿಕಾರದ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿತು. 

ಪಿಯುಸಿಎಲ್ ಪರ ವಾದಿಸಿದ ವಕೀಲರು, ರಾಜ್ಯದ 10,718 ವಲಸೆ ಕಾರ್ಮಿಕರು ತಮ್ಮ ಸಮಸ್ಯೆಗಳ ಕುರಿತು ಜಿಲ್ಲಾಡಳಿತಕ್ಕೆ ದೂರುಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾಡಳಿತವು ಕ್ರಮಗಳನ್ನು ಕೈಗೊಂಡಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ರಾಜ್ಯದಲ್ಲಿರುವ 10,718 ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಿಯುಸಿಎಲ್ನವರು ರಾಜ್ಯ ಸರ್ಕಾರಕ್ಕೆ ನೀಡಬೇಕು. ಈಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com