ರಾಜ್ಯದಲ್ಲಿ ಕೋವಿಡ್‌-19: ಒಂದೇ ದಿನ 12 ಹೊಸ ಪ್ರಕರಣ: ಸೋಂಕಿತರ ಸಂಖ್ಯೆ 175ಕ್ಕೇರಿಕೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 25 ಮಂದಿ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 25 ಮಂದಿ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 3, ಬೆಂಗಳೂರು ಗ್ರಾಮಾಂತರದಲ್ಲಿ 1, ಮಂಡ್ಯದಲ್ಲಿ 3,  ಕಲಬುರಗಿಯಲ್ಲಿ 2, ಬಾಗಲಕೋಟೆಯಲ್ಲಿ 2 ಹಾಗೂ ಗದಗ್ ನಲ್ಲಿ 1 ಪ್ರಕರಣ ಪತ್ತೆಯಾಗಿವೆ.

ಇಂದು ಪತ್ತೆಯಾದ ಪ್ರಕರಣಗಳ ಪೈಕಿಯಲ್ಲಿ ಏಳು ಪ್ರಕರಣಗಳು ತಬ್ಲೀಘ್ ಗೆ ಸಂಬಂಧಿಸಿದವುಗಳಾಗಿವೆ.ದೆಹಲಿಯ ನಿಜಾಮುದ್ದೀನ್ ನಲ್ಲಿ ಮಾರ್ಚ್ 13ರಿಂದ 18ರವರೆಗೂ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಮೂವರು ಹಾಗೂ ಬಾಗಲಕೋಟೆಯ ಮುಧೋಳ್ ನ ವ್ಯಕ್ತಿಯೊಬ್ಬರಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟಿದೆ.

ಮತ್ತೊಂದೆಡೆ  ಮಂಡ್ಯದಲ್ಲಿ ತಬ್ಲೀಘಿ ಜೊತೆಗೆ ಸಂಪರ್ಕದಲ್ಲಿದ್ದ ಮೂವರಲ್ಲಿಯೂ ಸೋಂಕು ಪತ್ತೆಯಾಗಿದೆ. ಇವೆರೆಲ್ಲರನ್ನೂ ಗುರುತಿಸಲಾಗಿರುವ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

164ನೆ ಸೋಂಕಿತ ಬಾಗಲಕೋಟೆಯ ಮುಧೋಳ ತಾಲೂಕಿನ 33 ವರ್ಷದ ಯುವಕನಾಗಿದ್ದು, ಈತ ದೆಹಲಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಪಾಲ್ಗೊಂಡಿದ್ದ. ಈತನನ್ನು ಬಾಗಲಕೋಟೆ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ.
165ನೇ ಸೋಂಕಿತ ಬಾಗಲಕೋಟೆಯವನಾಗಿದ್ದು, ಸೋಂಕಿತ 125ನೇ ನೆರೆಹೊರೆಯವನಾಗಿದ್ದಾನೆ. ಈತನನ್ನು ಅದೇ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

166ನೇ ಸೋಂಕಿತ ಗದಗದ 80 ವರ್ಷ ಪ್ರಾಯದ ವೃದ್ಧೆಯಾಗಿದ್ದು, ಹಿಂದಿನಿಂದಲೂ ಉಸಿರಾಟದ ಸಮಸ್ಯೆ ಇರುವವರಾಗಿದ್ದಾರೆ. ಅವರನ್ನು ಗದಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

167ನೇ ಸೋಂಕಿತ 29 ವರ್ಷದ ಬೆಂಗಳೂರಿನ ನಿವಾಸಿಯಾಗಿದ್ದು, ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. 168,169ನೇ ಸೋಂಕಿತರು ಕೂಡ ಬೆಂಗಳೂರು ನಿವಾಸಿಯಾಗಿದ್ದು, 50 ವರ್ಷ ಪ್ರಾಯದ ಪುರುಷ ರೋಗಿಯಾಗಿದ್ದಾರೆ. ಇವರು ಕೂಡ ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ.

170ನೇ ಸೋಂಕಿತ 68 ವರ್ಷ ಪ್ರಾಯದ ಬೆಂಗಳೂರು ನಿವಾಸಿಯಾಗಿದ್ದು, ಅವರು ದುಬೈಯಿಂದ ಹಿಂದಿರುಗಿದ ಪ್ರವಾಸ ಇತಿಹಾಸ ಹೊಂದಿದ್ದಾರೆ. 171, 172, 173 ನೇ ಸೋಂಕಿತರು ಮಂಡ್ಯದ ಕ್ರಮವಾಗಿ 32 ಮತ್ತು 36, 65 ವರ್ಷಗಳ ಪುರುಷ ವ್ಯಕ್ತಿಗಳಾಗಿದ್ದು, ಇವರು ರೋಗಿ 134, 135, 136, 137, 138ನೇ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರು. ಅವರನ್ನು ಕೂಡ ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

174ನೇ ಸೋಂಕಿತೆ ಕಲಬುರ್ಗಿಯ 28 ವರ್ಷ ಪ್ರಾಯದ ಮಹಿಳೆಯಾಗಿದ್ದು, 124ನೇ ರೋಗಿಯ ಸೊಸೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ175, ಕಲಬುರಗಿಯ 57 ವರ್ಷ ಪ್ರಾಯದ ಪುರುಷ ವ್ಯಕ್ತವಾಗಿದ್ದು, ಇವರು ಕೂಡ ಉಸಿರಾಟದ ಸಮಸ್ಯೆ ಹೊಂದಿದವರಾಗಿದ್ದಾರೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com