ಕರ್ನಾಟಕ: ಐಸೋಲೇಷನ್ ವಾರ್ಡ್ ಆಗಿ 270 ರೈಲು ಬೋಗಿಗಳ ಪರಿವರ್ತನೆ!

ದೇಶದಲ್ಲಿ ಪ್ರತ್ಯೇಕತೆ ಸೌಲಭ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವಲಯವು 270 ಬೋಗಿಗಳನ್ನು ಕೋವಿಡ್- ಕ್ವಾರೆಂಟೈನ್ ವಾರ್ಡ್ ಗಳಾಗಿ ಪರಿವರ್ತಿಸಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ದೇಶದಲ್ಲಿ ಪ್ರತ್ಯೇಕತೆ ಸೌಲಭ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವಲಯವು 270 ಬೋಗಿಗಳನ್ನು ಕೋವಿಡ್- ಕ್ವಾರೆಂಟೈನ್ ವಾರ್ಡ್ ಗಳಾಗಿ ಪರಿವರ್ತಿಸಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ದೇಶದಲ್ಲಿ ಐಸೋಲೇಷನ್ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸ್ಲೀಪರ್ ದರ್ಜೆಯ ಕೋಚ್ ಗಳನ್ನು ಕೋವಿಡ್- ಐಸೊಲೇಷನ್ ವಾರ್ಡ್ ಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಕ್ಯಾರೆಂಟೈನ್ ಹಬ್‌ಗಳಾಗಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ ಎಂದು ಅಧಿಕೃತ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇಂತಹ ರೈಲು ಬೋಗಿಗಳಲ್ಲಿ ವೈದ್ಯಕೀಯ ಮಾರ್ಗಸೂತ್ರದಂತೆ ಸೌಕರ್ಯಗಳಿರುತ್ತವೆ.ಐಸೋಲೇಷನ್ ವಾರ್ಡ್ ಉದ್ದೇಶದಿಂದ ಪ್ರತಿಯೊಂದು ಕೋಚ್ ಗಳನ್ನು ಎಂಟು ಕ್ಯಾಬಿನ್ ಗಳಾಗಿ  ಪರಿವರ್ತಿಸಲಾಗಿದೆ, 

ಮಾರ್ಚ್ 30 ರಂದು ರೈಲ್ವೆ ಮಂಡಳಿ ನೀಡಿರುವ ಕೋಚ್ ಐಸೋಲೇಷನ್ ಮೂಲ ಮಾದರಿ ಪ್ರಕಾರ, 312 ಕೋಚ್ ಗಳನ್ನು ಕ್ವಾರೆಂಟೈನ್ ವಾರ್ಡ್ ಗಳಾಗಿ ಮಾಡಲು ಸೂಚಿಸಲಾಗಿದೆ. ಆದರೆ, ಈವರೆಗೂ 270 ಕೋಚ್ ಗಳನ್ನು ವಾರ್ಡ್ ಗಳಾಗಿ ನೈರುತ್ಯ ರೈಲ್ವೆ ವಲಯ ಬದಲಾಯಿಸಿದೆ ಎಂದು ಅವರು ತಿಳಿಸಿದ್ದಾರೆ. 

270 ಬೋಗಿಗಳ ಪೈಕಿಯಲ್ಲಿ ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ 76 ಕೋಚ್ ಗಳು, ಮೈಸೂರು (71) ಬೆಂಗಳೂರು ವಲಯ (61) ಮೈಸೂರು ವಿಭಾಗೀಯ (29) ಹುಬ್ಬಳ್ಳಿ ವಿಭಾಗೀಯ (33)  ಬೋಗಿಗಳು ಸೇರಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com