ಕೊರೋನಾ: ರಾಜ್ಯದಲ್ಲಿ ಒಂದೇ ದಿನ ಎರಡು ಸಾವು, ಕರ್ನಾಟಕದಲ್ಲಿ  ಸಾವಿನ ಸಂಖ್ಯೆ 8ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಇಂದು ಒಂದೇ ದಿನ ಕೊರೋನಾವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ಬಳಿಕ ಇದೀಗ ಬೆಂಗಳೂರಿನ ೬೫ ವರ್ಷದ ವ್ಯಕ್ತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.
ಕೊರೋನಾ: ರಾಜ್ಯದಲ್ಲಿ ಒಂದೇ ದಿನ ಎರಡು ಸಾವು, ಕರ್ನಾಟಕದಲ್ಲಿ  ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಇಂದು ಒಂದೇದಿನ  ಕೊರೋನಾವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ಬಳಿಕ ಇದೀಗ ಬೆಂಗಳೂರಿನ 65ವರ್ಷದ ವ್ಯಕ್ತಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ.

ಮೃತನಿಗೆ ಹೃದ್ರೋಗ ಸಮಸ್ಯೆ ಇದ್ದು ಅನಾರೋಗ್ಯದ ಕಾರಣ ನಿನ್ನೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಈತನನ್ನು ಪ್ರತ್ಯೇಕ ವಾರ್ಡಿನಲ್ಲಿಟ್ಟಿ ಕೊರೋನಾ ಪರೀಕ್ಷೆ ನಡೆಸಿದ್ದಾಗ ಕೊರೋನಾ ಇರುವುದು ದೃಢವಾಗಿದೆ.

ಇದರ ಕುರಿತು ಆರೋಗ್ಯ ಸಚಿವ ಬಿ, ಶ್ರೀರಾಮುಲು ಟ್ವೀಟ್ ಮಾಡಿದ್ದು "ನಿನ್ನೆ ರಾತ್ರಿ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ದಾಖಲಾದ 65 ವರ್ಷದ ವ್ಯಕ್ತಿಯೊಬ್ಬರು ಇಂದು ಮೃತರಾಗಿದ್ದಾರೆ. ಇವರು ಹೃದ್ರೋಗದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಇವರನ್ನು ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ,ಕೋವಿಡ್ ಪರೀಕ್ಷೆ ಮಾಡಲಾಗಿ, ವರದಿಯಲ್ಲಿ ಸೋಂಕು ದೃಢಪಟ್ಟಿದೆ." ಎಂದಿದ್ದಾರೆ.

ಇದಕ್ಕೆ ಮುನ್ನ ಇಂದು ಸಂಜೆ ಕಲಬುರಗಿಯ ಇಎಸ್‍ಐ ಆಸ್ಪತ್ರೆಯಲ್ಲಿ ರೋಗಿ ಸಂಖ್ಯೆ-205 55 ವರ್ಷದ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com