ಕೊವಿಡ್-19: ಕಲಬುರಗಿಯಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 16ಕ್ಕೆ‌ ಏರಿಕೆ

ದೇಶದಲ್ಲೇ ಮೊದಲ‌ ಬಾರಿಗೆ ಕಲಬುರಗಿ ವೃದ್ಧನನ್ನು ಬಲಿ ಪಡೆದಿದ್ದ ಕೊರೋನಾ, ಇದೀಗ ಬೆಂಬಿಡದೇ ಬೇತಾಳದಂತೆ ಬೆನ್ನತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ದೇಶದಲ್ಲೇ ಮೊದಲ‌ ಬಾರಿಗೆ ಕಲಬುರಗಿ ವೃದ್ಧನನ್ನು ಬಲಿ ಪಡೆದಿದ್ದ ಕೊರೋನಾ, ಇದೀಗ ಬೆಂಬಿಡದೇ ಬೇತಾಳದಂತೆ ಬೆನ್ನತ್ತಿದೆ.

ಸೋಮವಾರ ರಾತ್ರಿಯಷ್ಟೇ 55 ವರ್ಷದ ಕೊರೊನಾ ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಕಲಬುರಗಿ ನಗರದ ಮೂವರನ್ನು ಬಲಿಪಡೆದಿದೆ.

ಮಂಗಳವಾರ ಮತ್ತೆ ಮೂರು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ‌.

ರೋಗಿ ಸಂಖ್ಯೆ 177 ಸಂಪರ್ಕದಲ್ಲಿದ್ದ 10 ವರ್ಷದ ಬಾಲೆ ಹಾಗೂ 35 ವರ್ಷದ ಮಹಿಳೆ ಸೇರಿ ರೋಗಿ ಸಂಖ್ಯೆ 255 ಅವರ 51 ವರ್ಷದ ಸಹೋದರನಿಗೆ ಕೊವಿಡ್-19‌ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಲಬುರಗಿ ನಗರ ಹೊರತಾಗಿ ಜಿಲ್ಲೆಯ ಶಹಾಬಾದ್ ಪಟ್ಟಣ ಹಾಗೂ ಚಿತ್ತಾಪುರ ತಾಲೂಕಿನ ವಾಡಿ ಗ್ರಾಮಕ್ಕೂ ಕೊರೋನಾ ಪಸರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನ ಮತ್ತಷ್ಟು ಬೆಚ್ಚಿಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com