ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿಕ್ಷಣ ಇಲಾಖೆ ಹೊಸ ಪ್ರಯತ್ನ, ಮಕ್ಕಳ ಯುಟ್ಯೂಬ್ ಚಾನಲ್ ಪ್ರಾರಂಭಕ್ಕೆ ನಿರ್ಧಾರ: ಸುರೇಶ್ ಕುಮಾರ್

ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಹೊಸ ಪ್ರಯತ್ನಕ್ಕೆ ಮುಂದಾಗಿ ಪ್ರಪ್ರಥಮ ಪ್ರಯೋಗವಾಗಿ ಮಕ್ಕಳ ಯುಟ್ಯೂಬ್ ಚಾನಲ್ ಪ್ರಾರಂಭಿಸಲು ನಿರ್ಧರಿಸಿದೆ.

ಬೆಂಗಳೂರು: ಬೇಸಿಗೆ ರಜೆ, ಲಾಕ್ ಡೌನ್ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಹಕಾರಿಯಾಗಲೆಂದೇ ಶಿಕ್ಷಣ ಇಲಾಖೆ ಹೊಸ ಪ್ರಯತ್ನಕ್ಕೆ ಮುಂದಾಗಿ ಪ್ರಪ್ರಥಮ ಪ್ರಯೋಗವಾಗಿ ಮಕ್ಕಳ ಯುಟ್ಯೂಬ್ ಚಾನಲ್ ಪ್ರಾರಂಭಿಸಲು ನಿರ್ಧರಿಸಿದೆ. 

ಶೀಘ್ರದಲ್ಲೇ ಮಕ್ಕಳ ವಾಣಿ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಾರಕ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈಗಾಗಲೇ ಮುನ್ನೆಚ್ಚರಿಕೆಯಾಗಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿಶಿಕ್ಷಣ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗಾಗಿ ಹಾಗೂ ಪೋಷಕರಿಗಾಗಿ ಯುಟ್ಯೂಬ್ ಚಾನಲ್ ಆರಂಭಿಸುತ್ತಿದ್ದು, ರಜೆ ದಿನಗಳಲ್ಲಿ ಮಕ್ಕಳಿಗೆ ಬೇಸರವಾಗದಂತೆ ಹೊಸ ಪ್ರಯತ್ನ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. 
ಈ ಯೂಟ್ಯಬ್ ಚಾನಲ್ ಮೂಲಕ ಮಕ್ಕಳಿಗೆ ಉಪಯುಕ್ತ ಮಾಹಿತಿ ತಿಳಿಸುವುದು, ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. 

ಸುಮಾರು 1 ಗಂಟೆಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗುವುದು. ಈ 1 ಗಂಟೆಗಳ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಕ್ವಿಜ್, ವಿವಿಧ ಆಟ ಗಳಿರುತ್ತದೆ. ಮನರಂಜನೆಯ ಜೊತೆಜೊತೆಗೆ ಜ್ಞಾನ ಪಸರಿಸುವುದು ಶಿಕ್ಷಣ ಇಲಾಖೆಯ ಈ ಪ್ರಯತ್ನದ ಉದ್ದೇಶವಾಗಿದೆ. 

ಇದರಲ್ಲಿ ಮಕ್ಕಳು ಹಾಗೂ ಪೋಷಕರು ಪಾಲ್ಗೊಳ್ಳಬಹುದಾಗಿದ್ದು, ತಮ್ಮ ಚಟುವಟಿಕೆಯ ವಿಡಿಯೋ ತುಣುಕನ್ನು ರವಾನಿಸಿದರೆ, ಅದನ್ನು ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸುದ್ದಿಗಳೇ ಆರ್ಭಟಿಸುತ್ತಿದ್ದು ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಹೊಸ, ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ ಎಂದೂ ದು ಸಚಿವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com