ಹಿಗ್ಗಿದ ಕರೋನಾ ಕಬಂಧ ಬಾಹು: ಕುಗಿದ  ಬಿಬಿಎಂಪಿ ಬಜೆಟ್!

ರಾಜ್ಯ ಮತ್ತು ದೇಶಾದ್ಯಂತ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ ಕುಗ್ಗಿದೆ. ಸೋಮವಾರ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು,10,895.48 ಕೋಟಿ ರು ಮೌಲ್ಯದ ಬಜೆಟ್ ಇದಾಗಿದೆ.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ರಾಜ್ಯ ಮತ್ತು ದೇಶಾದ್ಯಂತ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ ಕುಗ್ಗಿದೆ. ಸೋಮವಾರ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು,10,895.48 ಕೋಟಿ ರು ಮೌಲ್ಯದ ಬಜೆಟ್ ಇದಾಗಿದೆ.

ಈ ಬಾರಿ ಬಜೆಟ್‌ನಲ್ಲಿ ಸ್ಮಾರ್ಟ್ ಶಿಕ್ಷಣ, ಶುದ್ಧ ಕುಡಿಯುವ ನೀರು, ಪರಿಸರ ಸಂರಕ್ಷಣೆ ಹಾಗೂ ಮೂಲಸೌಕರ್ಯಕ್ಕೆ ಅದ್ಯತೆ. ಪ್ರತಿ ಗೃಹೋಪಯೋಗಿ ಸಂಪರ್ಕಕ್ಕೆ  ತಿಂಗಳಿಗೆ 10 ಸಾವಿರ ಲೀಟರ್ ನೀರು ಪೂರೈಕೆ. ಇದಕ್ಕಾಗಿ ಬಜೆಟ್‌ನಲ್ಲಿ ₹43 ಕೋಟಿ ಕಾಯ್ದಿರಿಸಲಾಗಿದೆ. ಪಾಲಿಕೆ ಕಚೇರಿ ಶಾಲಾ ಕಾಲೇಜು ಹಾಗೂ ಆಸ್ಪತ್ರೆ ಬಳಿ ಡಿಜಿಟಲ್ ಡಿಸ್‌‌ಪ್ಲೇ ₹5 ಕೋಟಿ,
ಹೊಸ ಸ್ಮಶಾನ ನಿರ್ಮಾಣಕ್ಕೆ ₹10 ಕೋಟಿ, ರಾಜಕಾಲುವೆ ಸ್ವಚ್ಛತೆ ಹಾಗೂ ಪ್ರವಾಹ ತಡೆ ಕಾಮಗಾರಿಗಳಿಗೆ ₹10 ಕೋಟಿ, ಪಾಲಿಕೆ ವ್ಯಾಪ್ತಿಯ ವೃತ್ತಗಳ ಸುಂದರೀಕರಣಕ್ಕೆ ₹15 ಕೋಟಿ, ಮೇಲ್ಸೇತುವೆ, ಕೆಳಸೇತುವೆ ದುರಸ್ತಿ ಮತ್ತು ನಿರ್ವಹಣೆಗೆ ₹ 40 ಕೋಟಿ ಮೀಸಲಿಡಲಾಗಿದೆ. ರಾಜಕಾಲುವೆ ಅಭಿವೃದ್ಧಿಗೆ ₹ 200 ಕೋಟಿ ಮೀಸಲಿಡಲಾಗಿದೆ. 

ಈ ಬಾರಿಯ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ವೈಟ್ ಟಾಪಿಂಗ್ ಬಗ್ಗೆ ಪ್ರಸ್ತಾಪಿಸಿಲ್ಲ, ಜೊತೆಗೆ ಪಿಂಕ್ ಬೇಬಿ ಯೋಜನೆಯ ಪ್ರಸ್ತಾಪಿಸಿಲ್ಲ.

2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗುವಂತೆ 10 ಸಾವಿರ ಲೀ.ವರೆಗೆ ಉಚಿತವಾಗಿ ನೀರು ಸರಬರಾಜು.  ದಿವಂಗತ ಅನಂತಕುಮಾರ್ ಹೆಸರಿನಲ್ಲಿ ಪ್ರತಿ ವಾರ್ಡ್‌ನ 15 ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಗೆ ಅಸ್ತು. . ಬಿಬಿಎಂಪಿ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟಕ್ಕೆ ಅವಕಾಶ ಮತ್ತು ಇದಕ್ಕಾಗಿ 2.85 ಕೋಟಿ ರೂ. ಮೀಸಲು. ಪಾಲಿಕೆಯ ಎಲ್ಲ ಶಾಲಾ- ಕಾಲೇಜು ಶಿಕ್ಷಕರಿಗೆ ಏಕರೂಪದ ಸಮವಸ್ತ್ರ ಜಾರಿಗೆ ಒಪ್ಪಿಗೆ.

ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಉಚಿತವಾಗಿ ಅಂಚೆ ಮೂಲಕ ಜನರಿಗೆ ತಲುಪಿಸಲು ಕ್ರಮ, ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಹಾಗೂ ದಾಸರಹಳ್ಳಿ ವಲಯದಲ್ಲಿ ಹೊಸದಾಗಿ ಪಾಲಿಕೆಯ ಶಾಲೆ ನಿರ್ಮಾಣಕ್ಕೆ ಹತ್ತು ಕೋಟಿ ರೂ. ನಿಗದಿ. ಬನ್ನೇರುಘಟ್ಟ ರಸ್ತೆಯಲ್ಲಿ ಪಂಡಿತ್ ದೀನದಯಾಳು ಉಪಾಧ್ಯಾಯರ ಹೆಸರಿನಲ್ಲಿ 25 ಐಸಿಯು ಹಾಸಿಗೆ ಸಾಮರ್ಥ್ಯದ ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.ನೀಡಲಾಗಿದೆ.

ಧ್ರುವತಾರೆ ಯೋಜನೆಯಡಿ ಕ್ರೀಡಾ ಪಟುಗಳಿಗೆ 50 ಲಕ್ಷ ಹಣ ಮೀಸಲಿಡಲಾಗಿದೆ., 1 ಲಕ್ಷ ರು ಹಣ ಕನ್ನಡ ಪರ ಸಂಘಟನೆಗಳ ಬಲವರ್ಧನೆಗೆ ಮತ್ತು ನಿವೃತ್ತ ಕಲಾವಿದರ ಧನಸಹಾಯ ಮಾಡಲು ನೀಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com