ಪತ್ರಕರ್ತರಿಗೆ ವಿಶೇಷ ಕೋವಿಡ್‌ ತಪಾಸಣಾ ಶಿಬಿರ ನಡೆಸಲು ಮುಖ್ಯಮಂತ್ರಿ ಸೂಚನೆ

ದಿನನಿತ್ಯವೂ ಸಾರ್ವಜನಿಕರ ಮಧ್ಯೆಯೇ ಇರುವ ಪರ್ತಕರ್ತರಿಗೂ ಮಹಾರಾಷ್ಟ್ರ ಮಾದರಿಯಲ್ಲಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಪತ್ರಕರ್ತರಿಗೂ ತಪಾಸಣೆ ನಡೆಸಲು ಸೂಚಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ದಿನನಿತ್ಯವೂ ಸಾರ್ವಜನಿಕರ ಮಧ್ಯೆಯೇ ಇರುವ ಪರ್ತಕರ್ತರಿಗೂ ಮಹಾರಾಷ್ಟ್ರ ಮಾದರಿಯಲ್ಲಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಮನವಿಗೆ ಸ್ಪಂದಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಪತ್ರಕರ್ತರಿಗೂ ತಪಾಸಣೆ ನಡೆಸಲು ಸೂಚಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಸಚಿವರು, ಮಹಾರಾಷ್ಟ್ರದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಕೋವಿಡ್‌ ತಪಾಸಣಾ ಶಿಬಿರದಲ್ಲಿ 171 ಮಂದಿ ಪತ್ರಕರ್ತರ ಗಂಬಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು, ಈ ಪೈಕಿ 53 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ಕರ್ನಾಟಕದಲ್ಲಿಯೂ ಈ ರೀತಿ ಪತ್ರಕರ್ತರಿಗಾಗಿ ತಪಾಸಣಾ ಮಾಡಬೇಕಾದ ಅಗತ್ಯವಿದೆ. ಆದ್ದರಿಂದ ಆರೋಗ್ಯ ಮತ್ತು ವಾರ್ತಾ ಇಲಾಖೆಗೆ ತುರ್ತು ನಿರ್ದೇಶನ ನೀಡಿ ಸಾರ್ವಜನಿಕರ ಸಂಪರ್ಕದಲ್ಲಿಯೇ ಇರುವ ಪತ್ರಕರ್ತರಿಗೆ ಅಗತ್ಯ ತಪಾಸಣಾ ಶಿಬಿರ ಏರ್ಪಡಿಸಬೇಕು ಎಂದು ಈ ಮೂಲಕ ಕೋರುತ್ತೇನೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ, ವಾರ್ತಾ ಇಲಾಖೆ ಆಯುಕ್ತರು ತಕ್ಷಣ ಎಲ್ಲಾ ಪತ್ರಕರ್ತರಿಗೆ ಅಗತ್ಯ ತಪಾಸಣೆ ಶಿಬಿರ ಏರ್ಪಡಿಸಲು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com