ಪ್ರತ್ಯಕ್ಷ ದೃಶ್ಯ
ರಾಜ್ಯ
ನಾಗಮಂಗಲ: ಲಾಕ್ ಡೌನ್ ನಡುವೆ ಕಾರ್‌ನಲ್ಲಿ ಅಕ್ರಮ ಮದ್ಯ ಸಾಗಾಟ, ಮೂವರ ಬಂಧನ
ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದಿರುವ ನಾಗಮಂಗಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ನಾಗಮಂಗಲ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದಿರುವ ನಾಗಮಂಗಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮಾಕಳ್ಳಿ ಗ್ರಾಮದ ಹರೀಶ್ ಗೌಡ, ಸಂದೀಪ್, ದಾವಣಗೆರೆಯ ಕ್ಯಾಶಿನಕೆರೆಯ ಸೋಮಶೇಖರ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಇಂದು ಸಂಜೆ 4.45 ರ ಸಮಯದಲ್ಲಿ ನಾಗಮಂಗಲ ಟೌನ್ ಜೆವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಪಿ.ಎಸ್.ಐ ರವಿಕಿರಣ್ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸಿದ ವೇಳೆ ಬೆಳ್ಳೂರು ಕಡೆಯಿಂದ ಬರುತ್ತಿದ್ದ ಸ್ವಿಪ್ಟ್ ಕಾರ್(ಕೆಎ;53 ಎಂಬಿ.6899)ನ್ನು ತಪಾಸಣೆ ನಡೆಸಿದಾಗ 5 ಬಾಕ್ಸ್ ನಲ್ಲಿದ್ದ ಸುಮಾರು 60 ಬಾಟಲ್ ಬಿಯರ್ ಪತ್ತೆಯಾಗಿದೆ.
ತಕ್ಷಣವೇ ಈ ಮೂವರನ್ನು ಬಂಧಿಸಿದ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ