ಬೆಂಗಳೂರಿನ ಹೊಂಗಸಂದ್ರ ಬಿಬಿಎಂಪಿ ಕಾರ್ಮಿಕರಿಗೆ ಕೊರೊನಾ‌ ಸೋಂಕು ದೃಢ, ಬಡಾವಣೆ ಸೀಲ್ ಡೌನ್

ಬೆಂಗಳೂರಿನ ಹೊಂಗಸಂದ್ರ ಬಡಾವಣೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು 188 ಜನರನ್ನು ಕ್ವಾರೇಂಟೇನ್‌ನಲ್ಲಿಡಲಾಗಿದೆ. 
ಕೊರೊನವೈರಸ್‍
ಕೊರೊನವೈರಸ್‍

ಬೆಂಗಳೂರು: ಬೆಂಗಳೂರಿನ ಹೊಂಗಸಂದ್ರ ಬಡಾವಣೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು 188 ಜನರನ್ನು ಕ್ವಾರೇಂಟೇನ್‌ನಲ್ಲಿಡಲಾಗಿದೆ. 

ಹೊಂಗಸಂದ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು ನಿನ್ನೆ ರಾತ್ರಿಯಿಂದ ಬಿಬಿಎಂಪಿ ಆಪರೇಷನ್ ಕ್ವಾರಂಟೈನ್‌ಗೆ ಚಾಲನೆ ನೀಡಿದೆ. ಬೊಮ್ಮನಹಳ್ಳಿ ಹೊಂಗಸಂದ್ರ ಮತ್ತು ಜ್ಯೋತಿ ನಗರದಲ್ಲಿ ನಿನ್ನೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2:25ರ ವರೆಗೂ ಕಾರ್ಯಾಚರಣೆ ನಡೆಸಿದೆ. ಪ್ರಸ್ತುತ ಕ್ವಾರಂಟೈನ್‌ಗೆ ಒಳಗಾಗಿರುವ ಎಲ್ಲರೂ ಬಿಬಿಎಂಪಿ ಕೂಲಿ ಕಾರ್ಮಿಕರೇ ಆಗಿದ್ದು ಇವರಿಗೆ ಪ್ರತಿದಿನ ಅನೇಕ ವ್ಯಕ್ತಿ ಮತ್ತು ಸಂಘ ಸಂಸ್ಥೆಗಳು ಉಚಿತ ಆಹಾರ, ದಿನಸಿ ವಿತರಣೆ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪಟ್ಟಿ ಬಿಡುಗಡೆ ಮಾಡಿದ್ದು ಸಂಪರ್ಕಿತರ ಪಟ್ಟಿಯಲ್ಲಿ 24 ಪ್ರಾಥಮಿಕ ಮತ್ತು 164 ದ್ವಿತೀಯ ಹಂತದ ಸಂಪರ್ಕ ಪತ್ತೆಯಾಗಿದ್ದು ಆರೋಗ್ಯ ಇಲಾಖೆ ಆತಂಕಕ್ಕೀಡು ಮಾಡಿದೆ. ಹೀಗಾಗಿ ಒಟ್ಟು 188 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಅಪಾಯದ ಹಂತ ಅಂದುಕೊಂಡದ್ದಕ್ಕಿಂತ ಹೆಚ್ಚಾಗುವ ಆತಂಕದಿಂದಾಗಿ ಹೊಂಗಸಂದ್ರ ವಾರ್ಡ್ ನ ವಿದ್ಯಾ ಜ್ಯೋತಿ ಬಡಾವಣೆಯನ್ನು ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com