ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕೇರಳಿಗನ ರಕ್ಷಣೆ

ಮಾರ್ಚ್ 25 ರಿಂದ ತನ್ನ ಕುಟುಂಬಸ್ಥರನ್ನು ನೋಡದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 27 ವರ್ಷದ ಕೇರಳ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಚಿ: ಮಾರ್ಚ್ 25 ರಿಂದ ತನ್ನ ಕುಟುಂಬಸ್ಥರನ್ನು ನೋಡದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 27 ವರ್ಷದ ಕೇರಳ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ಮಾನಸಿಕ ಖಿನ್ನತೆಯಿಂದಾಗಿ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದ ವ್ಯಕ್ತಿಯನ್ನು ಅಖಿಲ ಭಾರತ ಮಲಯಾಳಂ ಸಂಘದ ಸಹಕಕಾರದಿಂದಾಗಿ ವ್ಯಕ್ತಿಯನ್ನು ರಕ್ಷಿಸಿ ಅಲಪ್ಪುರದ ಚೇರಿತಾಳದಲ್ಲಿರುವ ಮನೆಗೆ ಸುರಕ್ಷಿತವಾಗಿ ತಲುಪಿಸಲಾಗಿದೆ.

ಅಗ್ನಿಶಾಮಕ ಮತ್ತು ಸುರಕ್ಷತಾ ವಿಭಾಗದಲ್ಲಿ ನಿರ್ಮಾಣ ಕಂಪನಿ ಸೇರಲು ಯುವಕ ಬೆಂಗಳೂರಿಗೆ ಬಂದಿದ್ದ, ಆದರೆ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸಕ್ಕೆ ಸೇರಲು ಸಾಧ್ಯವಾಲಿಲ್ಲ,   ಹಾಗಾಗಿ ಹೆಗಡೆ ನಗರದಲ್ಲಿ ಪೇಯಿಂಗ್ ಗೆಸ್ಟ್ ನಲ್ಲಿ ಉಳಿದುಕೊಂಡಿದ್ದ, 

ಅಂಗಡಿಯೊಂದರ ಬಳಿ ಪಾದಚಾರಿ ರಸ್ತೆಯಲ್ಲಿ ಮಲಗಿದ್ದನ್ನು ಪೊಲೀಸರು ಗಮನಿಸಿದ್ದರು. ಆತನಿಂದ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸಿದ್ದರು. ಆತನ ಮಾನಸಿಕ ಖಿನ್ನತೆ ಗಮನಿಸಿದ ಪೊಲೀಸರು ಆತನ  ಕುಟುಂಬಸ್ಥರ ಬಗ್ಗೆ ಮಾಹಿತಿ ಕಲೆ ಹಾಕಿದರು ಎಂದು ಮಲಯಾಳಂ ಸಂಘದ ಅಧ್ಯಕ್ಷೆ ಬಿನು ದಿವಾಕರ್ ಹೇಳಿದ್ದಾರೆ.

ಆತನನ್ನು ಪೊಲೀಸರು ನಿಮ್ಹಾನ್ಸ್ ಗೆ ಏಪ್ರಿಲ್ 10 ರಂದು ಕರೆದೊಯ್ದಿದ್ದರು.  ಅವನ ಮಾನಸಿಕ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲಾಯಿತು, ಆತನ ಕುಟುಂಬಸ್ಥರ ಮನವಿಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೇರಳಕ್ಕೆ  ಕಳುಹಿಸಲಾಗಿದೆ. ವಯನಾಡ್ ಗಡಿಯ ವರೆಗೆ ಬಿಡಲಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com