ಬಡವರಿಗೆ ರೂ.1 ಕೋಟಿಯಷ್ಟು ಫುಡ್ ಕಿಟ್ಸ್ ನೀಡಿದ ಬಿಜೆಪಿ

ಲಾಕ್'ಡೌನ್ ಬಳಿಕ ಬಿಜೆಪಿ ಈ ವರೆಗೂ ಬಡವರಿಗೆ ರೂ.1 ಕೋಟಿಯಷ್ಟು ಫುಡ್ ಕಿಟ್ ವಿತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್'ಡೌನ್ ಬಳಿಕ ಬಿಜೆಪಿ ಈ ವರೆಗೂ ಬಡವರಿಗೆ ರೂ.1 ಕೋಟಿಯಷ್ಟು ಫುಡ್ ಕಿಟ್ ವಿತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. 

ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು 1 ಕೋಟಿಯಷ್ಟು ಫುಟ್ ಪ್ಯಾಕೆಟ್ಸ್ ಗಳನ್ನು ವಿತರಿಸಿದ್ದಾರೆ. ಇದರಲ್ಲಿ ರೂ.26 ಲಕ್ಷದಷ್ಟು ಪಡಿತರ ಕಿಟ್ಸ್ ಹಾಗೂ ರೂ.34 ಲಕ್ಷದಷ್ಟು ಮಾಸ್ಕ್ ಗಳನ್ನು ಕಳೆದ 1 ತಿಂಗಳಿನಿಂದ ನೀಡಿದ್ದಾರೆಂದು ಹೇಳಿದ್ದಾರೆ. 

ಮಾರ್ಚ್ 24 ರಿಂದ ಬಿಜೆಪಿ ಕಾರ್ಯಕರ್ತುರ 58,000 ಬೂತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೂ.4ಲಕ್ಷದಷ್ಟು ಆಹಾರವನ್ನು ತಯಾರಿಸಿ, ಬಡ ಕುಟುಂಬಗಳಿಗೆ ನೀಡಿದ್ದಾರೆ. ಅಲ್ಲದೆ,5 ಕೆಜಿ ಅಕ್ಕಿ, 1 ಲೀ ಎಣ್ಣೆ, ಗೋಧಿ ಹಿಟ್ಟು, ತೊಗರಿ ಬೇಳೆ ಇರುವ 26,07,561 ರಷ್ಟು ಪಡಿತರ ಕಿಟ್ಸ್ ಗಳನ್ನು ನೀಡಿದ್ದಾರೆ. ಪ್ರತೀನಿತ್ಯ 1 ಲಕ್ಷ ಮಾಸ್ಕ್ ಗಳನ್ನು ವಿತರಿಸಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com