ನಗರದಲ್ಲಿ ಕೊರೋನಾ ಹಾಟ್‌ಸ್ಪಾಟ್ ಸಂಖ್ಯೆ 42ಕ್ಕೆ ಏರಿಕೆ

ಕೊರೊನಾ ವೈರಾಣು ಸೋಂಕಿತ ಪ್ರಕರಣಗಳನ್ನು ಆಧರಿಸಿ ನಗರದ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಲಾಗಿದ್ದು ಕಂಟೈನ್ಮೆಂಟ್‌ ವಲಯಗಳ (ನಿಯಂತ್ರಿತ ಪ್ರದೇಶ) ಸಂಖ್ಯೆಯಲ್ಲೂ ಏರಿಕೆ ಕಂಡಿದೆ.
ಹಾಟ್ ಸ್ಪಾಟ್
ಹಾಟ್ ಸ್ಪಾಟ್
Updated on

ಬೆಂಗಳೂರು:ಕೊರೊನಾ ವೈರಾಣು ಸೋಂಕಿತ ಪ್ರಕರಣಗಳನ್ನು ಆಧರಿಸಿ ನಗರದ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಲಾಗಿದ್ದು ಕಂಟೈನ್ಮೆಂಟ್‌ ವಲಯಗಳ (ನಿಯಂತ್ರಿತ ಪ್ರದೇಶ) ಸಂಖ್ಯೆಯಲ್ಲೂ ಏರಿಕೆ ಕಂಡಿದೆ.

ಏಪ್ರಿಲ್ 14ರಂದು ಈ ವಾರ್ಡ್‌ಗಳ ಸಂಖ್ಯೆ 38 ಇತ್ತು. ಆನಂತರ ಕ್ರಮೇಣ ಇಳಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ 42ಕ್ಕೆ ಏರಿರುವುದು ಆತಂಕ ಮೂಡಿಸಿದೆ. ಹಂಪಿನಗರ, ಬ್ಯಾಟರಾಯನಪುರ, ಜಗಜೀವನ್‌ರಾಂನಗರ, ಛಲವಾದಿಪಾಳ್ಯ, ಶಿವನಗರ, ಪುಲಿಕೇಶಿನಗರ, ನಾಗಪುರ, ಭೈರಸಂದ್ರ ವಾರ್ಡ್‌ಗಳು ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಾಲಿಗೆ ಹೊಸದಾಗಿ ಸೇರಿವೆ.

ಹಾಟ್‌ಸ್ಪಾಟ್‌ ವಾರ್ಡ್‌ಗಳನ್ನು ಸೀಲ್‌ಡೌನ್‌ ಮಾಡುವುದಿಲ್ಲ. ಬದಲಿಗೆ ಆ ವಾರ್ಡ್‌ನಲ್ಲಿ ಸೋಂಕಿತರು ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವೆಂದು ಗುರುತಿಸಿ, ಸೀಲ್‌ಡೌನ್‌ ಮಾಡಲಾಗುತ್ತಿದೆ. ಈ ಮಧ್ಯೆ, ಕೊರೊನಾ ಸೋಂಕಿತರುವ ವಾಸವಿದ್ದ ಪ್ರದೇಶಗಳನ್ನು ಕಂಟೇನ್ಮೆಂಟ್‌ ವಲಯಗಳೆಂದು (ನಿಯಂತ್ರಿತ ಪ್ರದೇಶ) ಗುರುತಿಸುತ್ತಿದ್ದು, ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಈವರೆಗೆ 135 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 58 ಮಂದಿ ಗುಣಮುಖರಾಗಿದ್ದಾರೆ.

ಆರು ಮಂದಿ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ಮತ್ತು ಪಶ್ಚಿಮ ವಲಯದಲ್ಲಿಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ತಲಾ 37 ಪ್ರಕರಣಗಳು ವರದಿಯಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 450 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 4369 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com