
ಮಂಡ್ಯ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಪತ್ರಕರ್ತರಿಗೆ ಆಯೋಜಿಸಲಾಗಿದ ಕೊರೊನಾ ತಪಾಸಣಾ ಶಿಬಿರಕ್ಕೆ ಬಂದು ಅಡ್ಡಿ ಪಡಿಸಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಬಗ್ಗೆ ಸಚಿವದ್ವಯರು ಜಾಣ ಕುರುಡುತನ್ನ ಪ್ರದರ್ಶಿಸಿದರು.
ಇಂದು ಜಿ.ಪಂ.ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಪತ್ರಿಕಾ ಗೋಷ್ಟಿ ನಡೆಸುತಿದ್ದಾಗ ಘಟನೆ ಬಗ್ಗೆ ಯಾವುದೆ ಕ್ರಮ ಕೈಗೊಳ್ಳದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಾಗ ಸಚಿವರುಗಳು ಜಾರಿಕೆ ಉತ್ತರ ನೀಡಿ ಪತ್ರಕರ್ತರನ್ನು ಸಮಾದಾನ ಪಡಿಸಲು ಯತ್ನಿಸಿದ್ದರು.
ಇದಕ್ಕೂ ಮುನ್ನ ಸಚಿವ ಸುಧಾಕರ್ ಮಾತ್ತನಾಡಿ ರಾಜ್ಯದ ಇಲ್ಲಾ ಪತ್ರಕರ್ತರಿಗೂ ಕೊವಿಡ್ ಪರೀಕ್ಷೆ ಮಾಡಲು ಆದೇಶ ಮಾಡಲ್ಲಾಗಿದೆ ಹೀಗಾಗಿ ಪತ್ರಕರ್ತರು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು. ಇದರಿಂದ ಆಕ್ರೋಶಗೂಂಡ ಪತ್ರಕರ್ತರು ಜಿಲ್ಲಾಢಳಿತದ ಸೂಚನೆಯಂತೆ ಪತ್ರಕರ್ತರು ತಪಾಸಣೆ ಮಾಡಿಸುತ್ತಿದಾಗ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೆಗೌಡ ಹಾಗೂ ಆತನ ಪುತ್ರ ತಪಾಸಣೆಗೆ ಅಡ್ಡಿ ಪಡಿಸಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು,ವೈದ್ಯರಿಗೂ ಅಡ್ಡಿಪಡಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಸರ್ಕಾರದ ಶಿಷ್ಟಾಚಾರ ಉಲ್ಲಂಘಿಸಿದ್ದರು ಜಿಲ್ಲಾಢಳಿತ ಮೌನವಾಗಿದೆ ಎಂದು ಕಿಡಿ ಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್ ಹಲ್ಲೆ ನಡೆಸಿರುವುದು ತಪ್ಪು ,ಪತ್ರಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಈ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಲಿದಾರೆ.ಜನಪ್ರತಿನಧಿ ಹಾಗೂ ಪತ್ರಕರ್ತರ ಸಂಬAಧ ಶಾಶ್ವತವಾಗಿರಬೇಕು ನಮ್ಮಲ್ಲಿ ವ್ಯಾಜ್ಯ ಬೇಡ ಎಂದು ತಪ್ಪನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದರು.
ಉಸ್ತುವಾರಿ ಸಚಿವ ನಾರಾಯಣಗೌಡ ಮಾತನಾಡಿ ಘಟನೆ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ ಈ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಈ ಬಗ್ಗೆ ಯಾರು ಧೃತಿಗೆಡುವುದು ಬೇಡ ,ಮತ್ತೆ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಮಾತನಾಡಿ ಪತ್ರಕರ್ತರ ಬಾಯಿ ಮುಚ್ಚಿಸಿದರು.
-ನಾಗಯ್ಯ
Advertisement