ಕೊರೋನಾದಿಂದ ಗುಣಮುಖರಾದ ಮೈಸೂರಿನ 43 ಮಂದಿಯಿಂದ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ 

ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮೈಸೂರಿನ 43 ಮಂದಿ ಇದೀಗ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮಹಾಮಾರಿ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮೈಸೂರಿನ 43 ಮಂದಿ ಇದೀಗ ಪ್ಲಾಸ್ಮಾ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. 

ದೆಹಲಿ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ಬಂದು ಸೋಂಕಿಗೊಳಗಾಗಿದ್ದವರೂ ಸೇರಿ, ವಿವಿಧ ಸೋಂಕಿತರು ಇದೀಗ ಸೋಂಕಿನಿಂದ ಗುಣಮುಖರಾಗಿದ್ದು, ಎಲ್ಲರೂ ಬರವಣಿಗೆ ಮೂಲಕ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದೀಗ ಆಸ್ಪತ್ರೆಗಳು ಈ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಕೆ.ಆರ್. ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕಾರಿಗಳು ಮಾತನಾಡಿ, ಪ್ಲಾಸ್ಮಾ ಮತ್ತು ರಕ್ತದ ಇತರೆ ಅಂಶಗಳನ್ನು ಪ್ರತ್ಯೇಕಿಸಲು ಬಳಸುವ ಯತ್ನ ನಮ್ಮಲ್ಲಿದೆ. ಆದರೆ, ಘಟಕ ಹಳೆಯದಾಗಿದ್ದು, ಅದನ್ನು ನವೀಕರಿಸುವ ಅಗತ್ಯವಿದೆ ಎಂದು ತಿಳಿಸಿದೆ. 

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಸಿಪಿ ನಾಗರಾಜ್ ಮಾತನಾಡಿ, ಯಂತ್ರ ಬಳಕೆ ಬಗ್ಗೆ ಈಗಾಗಲೇ ಅನುಮತಿ ಕೋರಿ ಏಪ್ರಿಲ್ 15ರಂದೇ ಐಸಿಎಂಆರ್'ಗೆ ಪತ್ರ ಬಡೆಯಲಾಗಿದೆ. ಶೀಘ್ರದಲ್ಲೇ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಯಂತ್ರಗಳ ಪ್ರಸ್ತುತ ಸ್ಥಿತಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಇರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com