ಕೊರೋನಾಗೆ ಪುರುಷರೇ ಹೆಚ್ಚು ಬಲಿ ಏಕೆ...? ಇಲ್ಲಿದೆ ಉತ್ತರ!

ವಿಶ್ವದಾದ್ಯಂತ 2.13 ಲಕ್ಷ ಮಂದಿಯನ್ನು ಬಲಿ ಪಡೆದುಕೊಂಡಿರುವ ಕೊರೋನಾ ವೈರಸ್ ಮಹಿಳೆಯರಿಗಿಂತ ಪುರುಷರನ್ನೇ ಹೆಚ್ಚು ಬಲಿ ಪಡೆದುಕೊಂಡಿದೆ. ಇದಕ್ಕೆ ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಶ್ವದಾದ್ಯಂತ 2.13 ಲಕ್ಷ ಮಂದಿಯನ್ನು ಬಲಿ ಪಡೆದುಕೊಂಡಿರುವ ಕೊರೋನಾ ವೈರಸ್ ಮಹಿಳೆಯರಿಗಿಂತ ಪುರುಷರನ್ನೇ ಹೆಚ್ಚು ಬಲಿ ಪಡೆದುಕೊಂಡಿದೆ. ಇದಕ್ಕೆ ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ...

ಭಾರತದಲ್ಲೂ ಕೂಡ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸೋಂಕಿಗೊಳಗಾಗುತ್ತಿದ್ದಾರೆ. ರಾಜ್ಯದಲ್ಲಿಯೂ 154 ಮಹಿಳೆಯರು ಸೋಂಕಿಗೊಳಗಾಗಿದ್ದರೆ, ಇನ್ನುಳಿದವರೆಲ್ಲಾ ಪುರುಷರೇ ಆಗಿದ್ದಾರೆ. ತಮಿಳುನಾಡಿನಲ್ಲಿಯೂ 1,393 ಮಂದಿ ಪುರುಷರಲ್ಲಿ ಸೋಂಕು ಪತ್ತೆಯಾಗಿದ್ದರೆ, 665 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಕೇರಳದಲ್ಲಿಯೂ ಶೇ.66.7 ರಷ್ಟು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. 

ಕೊರೋನಾಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿ, ಸೋಂಕಿಗೊಳಗಾಗುತ್ತಿರುವುದೇ ಎಂಬುದರ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಕೆಲ ಕಾರಣಗಳು ತಿಳಿದುಬಂದಿದ್ದು, ನಿಖರವಾಗಿ ಮಾತ್ರ ಯಾವುದೇ ಕಾರಣಗಳೂ ದೃಢಪಟ್ಟಿಲ್ಲ. 

ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಆರೋಗ್ಯದಲ್ಲಿ ಉತ್ತಮವಾಗಿರುತ್ತಾರೆ. ಪುರುಷರಿಗೆ ಹೋಲಿಕೆ ಮಾಡಿದರೆ, ಕುಡಿಯುವ, ಧೂಮಪಾನ ಮಾಡುವ ಹಾಗೂ ಮಧುಮೇಹ ಇರುವ ಸಂಖ್ಯೆಗಳು ಮಹಿಳೆಯರಲ್ಲಿ ಕಡಿಮೆ. ಹೀಗಾಗಿಯೇ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯ ಮುರಳಿಯವರು ಹೇಳಿದ್ದಾರೆ. 

ಇನ್ನು ಮಹಿಳೆಯರಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸಲು ಕ್ರೊಮೋಸೋಮ್ ಕೂಡ ಒಂದು ಕಾರಣ. ಮಹಿಳೆಯರಲ್ಲಿರುವ ಹೆಚ್ಚುವರಿ ವರ್ಣತಂತು ಎರಡು ಎಕ್ಸ್ ವರ್ಣತಂತುಗಳನ್ನು ಹೊಂದಿದ್ದರೆ, ಪುರುಷರು ಒಂದು ಏಕ್ಸ್ ವೈ ಮಾತ್ರ ಹೊಂದಿರುತ್ತಾರೆ. 

ನಮ್ಮ ದೇಹದಲ್ಲಿನ ರೋಗನಿರೋಧಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಬಹುತೇಕ ಜೀನ್ (ಅನುವಂಶಿಕ ಧಾತುಗಳು) ಎಕ್ಸ್ ಕ್ರೋಮೋಸೋಮ್ ಗಳ ಮೇಲೆ ನಿರ್ಧರಿತವಾಗಿವೆ. ಹೀಗಾಗಿ ಹೆಚ್ಚುವರಿ ಕ್ರೋಮೋಸೋಮ್ ಹೆಚ್ಚು ತ್ವರಿತವಾಗಿ ಪ್ರತಿಕ್ರಿಯಿಸುವ ಮೂಲಕ ಹೆಚ್ಚು ರೋಗನಿರೋಧಕ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com