ಲಾಕ್ ಡೌನ್ ಎಫೆಕ್ಟ್: ಸಂಬಳ ಕಡಿತ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಗಳು!

ಕೊರೋನಾವೈರಸ್ ಲಾಕ್ ಡೌನ್ ಖಾಸಗಿ ಪ್ರಾಥಮಿಕ ಆರೋಗ್ಯ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಮುಂದಿನ ತಿಂಗಳು ಅಲ್ಲಿನ  ವೈದ್ಯರು, ನರ್ಸ್ ಗಳು ಮತ್ತಿತರ ವೈದ್ಯಕೀಯ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ, ಸಂಬಳ ಕಡಿತ ಅಥವಾ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾವೈರಸ್ ಲಾಕ್ ಡೌನ್ ಖಾಸಗಿ ಪ್ರಾಥಮಿಕ ಆರೋಗ್ಯ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಮುಂದಿನ ತಿಂಗಳು ಅಲ್ಲಿನ  ವೈದ್ಯರು, ನರ್ಸ್ ಗಳು ಮತ್ತಿತರ ವೈದ್ಯಕೀಯ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ, ಸಂಬಳ ಕಡಿತ ಅಥವಾ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ 

ಎಲ್ಲಾ ಮಟ್ಟದಲ್ಲಿನ ಉದ್ಯೋಗಗಳ ಸಂಬಳ ಮತ್ತಿತರ ಸಮಸ್ಯೆಗಳು ಮುಂದುವರೆಯಲಿದ್ದು, ಬಾಡಿಗೆ, ವಿದ್ಯುತ್, ಮತ್ತಿತರ ಸಾಧನ- ಸಲಕರಣಗೆಗಳು ದೊಡ್ಡ ಮತ್ತು ಸಣ್ಣ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ  ಸಿಬ್ಬಂದಿಗಳನ್ನು ಬಾದಿಸುತ್ತಿದೆ. 

15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನರ್ಸ್ ಗಳ ಸಂಬಳವನ್ನು ಕಡಿತ ಮಾಡುವುದಿಲ್ಲ, 30 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಂದ ಶೇ. 10 ರಿಂದ 20ರಷ್ಟು ಕಡಿತ ಮಾಡಲು ಎದುರು ನೋಡಲಾಗುತ್ತಿದೆ. 50 ಸಾವಿರಕ್ಕೂ ಹೆಚ್ಚು ಸಂಬಳ ಪಡೆಯುವ ವೈದ್ಯರಿಂದ ಹೆಚ್ಚಿನ ಮೊತ್ತ ಕಡಿತ ಮಾಡಲಾಗುವುದು, ಆದಾಗ್ಯೂ, ಇನ್ನೂ ನಿರ್ಧರಿಸಿಲ್ಲ, ಆರ್ಥಿಕ ಪರಿಸ್ಥಿತಿ ಉತ್ತಮಗೊಂಡ ಬಳಿಕ ಮೊದಲು ನಿಗದಿಯಾಗಿದ್ದ ಸಂಬಳವನ್ನು ನೀಡಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಗಳ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಮಿತಿ ಸದಸ್ಯ ಡಾ. ಹೆಚ್ .ಎಂ. ಪ್ರಸನ್ನ ತಿಳಿಸಿದ್ದಾರೆ. 

ಉದ್ಯೋಗದಾತರು ಮತ್ತು ಉದ್ಯೋಗಿಗಳ ಮೇಲಿನ ಸರ್ಕಾರದ ಇಪಿಎಫ್ ಕೊಡುಗೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಏಕೆಂದರೆ ಇದು ಶೇ, 9 ರಷ್ಟು ಉದ್ಯೋಗಿಗಳು 1500 ರೂ. ಗಿಂತ ಕಡಿಮೆ ಸಂಬಳ ಪಡೆಯುವ ಸಂಸ್ಥೆಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಿರುವುದರಿಂದ ಸರ್ಕಾರ ರಚನಾತ್ಮಕ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದ್ದಾರೆ. 

ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡುವ ಸಮಾಲೋಚಕ ವೈದ್ಯರು ಕೂಡಾ ಇದೇ ರೀತಿಯ ಭೀತಿಯಲ್ಲಿದ್ದಾರೆ. ಓಪಿಡಿಲ್ಲಿ ಪ್ರತಿದಿನ 50 ರೋಗಿಗಳನ್ನು ನೋಡುತ್ತೇವೆ. ಆದರೆ, ಈಗ ದಿನವೊಂದಕ್ಕೆ 5ರಿಂದ 10 ರೋಗಿಗಳನ್ನು ನೋಡುತ್ತಿದ್ದೇವೆ. ಇದು ಹಿರಿಯ ಸಮಾಲೋಚಕ ವೈದ್ಯರ ಸಂಬಳದ ಶೇ. 25 ರಿಂದ 30 ರಷ್ಟು ಸಂಬಳ ಕಡಿತಕ್ಕೆ ಕಾರಣವಾಗಿದೆ. ತಿಂಗಳಿಗೆ 1 ಲಕ್ಷ ಸಂಬಳ ಪಡೆಯುತ್ತಿದ್ದ ಯುವ ವೈದ್ಯರು ಇದೀಗ 30 ಸಾವಿರ ಪಡೆಯುವಂತಾಗಿದೆ ಎಂದು ಅನೇಕ ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ವೈದ್ಯರಾಗಿ ಸೇವೆ ಸಲ್ಲಿಸಿರುವ ತಜ್ಞ ವೈದ್ಯರು ಹೇಳಿದ್ದಾರೆ.

ಆರು ತಿಂಗಳ ಕಾಲ ಖಾಸಗಿ ನರ್ಸಿಂಗ್ ಹೋಮ್ ಮುಚ್ಚುವ ಸಂಬಂಧ ಮಾತುಕತೆ ನಡೆಯುತ್ತಿದೆ. ಕಣ್ಣಿನ ಆಸ್ಪತ್ರೆಗಳಲ್ಲಿ ಬರುತ್ತಿದ್ದ ರೋಗಿಗಳಲ್ಲಿ  ಶೇ. 90 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಉದ್ಯೋಗಿಗಳಿಗೆ ಸಂಬಳ ನೀಡಲು ಹಾಗೂ ಬಾಡಿಗೆ, ವಿದ್ಯುತ್ ಶುಲ್ಕ ಪಾವತಿಗೆ ಕಷ್ಟವಾಗಿದೆ ಎಂದು ಶೇಕರ್ ಕಣ್ಣಿನ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ರಾಜಶೇಖರ್ ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. 

ಕೆಲಸದಿಂದ ನೌಕರರನ್ನು ತೆಗೆಯುವುದಿಲ್ಲ, ಮುಂದಿನ ಒಂದೆರಡು ತಿಂಗಳಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ, ಉದ್ಯೋಗಿಗಳ ಸಂಬಳ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಎಂಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ಹಾಗೂ ರಾಮಕೃಷ್ಣ ಆಸ್ಪತ್ರೆಯ ನಿರ್ದೇಶಕ ಡಾ. ಪ್ರೇಮನಾಥ್  ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com