ಡೀಸೆಲ್ ದರ ಕಡಿತದಲ್ಲಿ ನಿರ್ಲಕ್ಷ್ಯ: ಲಾರಿ ಮಾಲೀಕರಿಂದ ಮುಷ್ಕರದ ಬೆದರಿಕೆ

 ಡೀಸೆಲ್ ಬೆಲೆ ಕಡಿತಗೊಳಿಸುವ ತಮ್ಮ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಗಣಿಸುತ್ತಿಲ್ಲ, ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ರಾಜ್ಯ ಮಾಲೀಕರ ಸಂಘ ರಾಷ್ಟ್ರದಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಲಾರಿ ಮಾಲೀಕರ ಅಸೋಸಿಯೇಷನ್ ಫೆಡರೇಷನ್ ಅಧ್ಯಕ್ಷ ಬಿ. ಚನ್ನಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡೀಸೆಲ್ ಬೆಲೆ ಕಡಿತಗೊಳಿಸುವ ತಮ್ಮ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಗಣಿಸುತ್ತಿಲ್ಲ,
ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ರಾಜ್ಯ ಮಾಲೀಕರ ಸಂಘ ರಾಷ್ಟ್ರದಾದ್ಯಂತ ಮುಷ್ಕರ ನಡೆಸಲಾಗುವುದು
ಎಂದು ರಾಜ್ಯ ಲಾರಿ ಮಾಲೀಕರ ಅಸೋಸಿಯೇಷನ್ ಫೆಡರೇಷನ್ ಅಧ್ಯಕ್ಷ ಬಿ. ಚನ್ನಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆನ್ನಾರೆಡ್ಡಿ, ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ
ಅಸಾಮಾನ್ಯ ರೀತಿಯಲ್ಲಿ ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ. ಅಲ್ಲದೇ, ಅತಿಯಾದ ತೆರಿಗೆ ವಿಧಿಸಲಾಗುತ್ತಿದೆ. 93 ಲಕ್ಷ ಲಾರಿಗಳು 
ಸರಕು ಸಾಗಾಟದಲ್ಲಿ ತೊಡಗಿದ್ದು, ಶೇ. 90 ರಷ್ಟು ಸಿಂಗಲ್ ಟ್ರಕ್  ಮಾಲೀಕರ ಒಡೆತನದಲ್ಲಿವೆ.  ಪ್ರತಿಯೊಂದು ಲಾರಿ ಓಡಿಸಲು ಕಿಲೋಮೀಟರ್ ಗೆ 26 ರೂ. ಡೀಸೆಲ್ ಗಾಗಿಯೇ ಹಾಕಬೇಕಾಗಿದೆ ಎಂದರು.

ಎಲ್ಲಾ ಮಾಲೀಕರು ಬಾಡಿಗೆ-ಖರೀದಿ ವ್ಯವಸ್ಥೆಯಲ್ಲಿ ಲಾರಿಗಳನ್ನು ಖರೀದಿಸಿರುತ್ತಾರೆ. ತಿಂಗಳು ಕಂತು ಕಟ್ಟಬೇಕಾಗುತ್ತದೆ ಇಲ್ಲದಿದ್ದರೆ
ಲಾರಿಯನ್ನು ಪೈನಾಶಿಯರ್ ವಶಕ್ಕೆ ಪಡೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ದೇಶಾದ್ಯಂತ ಎಲ್ಲಾ ಲಾರಿ ಮಾಲೀಕರ ಸಂಘದಿಂದ ಬೇಡಿಕೆ ಈಡೇರಿಸಲು ಒಂದು ತಿಂಗಳ ಗಡುವ ನೀಡಲಾಗಿದೆ. ಅಷ್ಟರೊಳಗೆ
ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ಮುಷ್ಕರ ನಡೆಸಲಾಗುವುದು ಎಂದು ಬಿ. ಚನ್ನಾರೆಡ್ಡಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com