ಗದಗ: ರಾಮನ ಪಾದ, ಹನುಮನ ಚಿತ್ರ ಬಿಡಿಸಿ ಮುಸ್ಲಿಂ ಕಲಾವಿದನಿಂದ ಶ್ರೀ ರಾಮ ಜಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿದ ಸಂಭ್ರಮದ ನಡುವೆ ಇಲ್ಲಿನ ಮುಸ್ಲಿಂ ಕಲಾವಿದ ಮುನಾಫ್ ಹರ್ಲಾಪುರ ರಾಮನ ಪಾದ ಮತ್ತು ಹನುಮನ ಚಿತ್ರಬಿಡಿಸಿ ರಾಮಜಪ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.
ಮುನಾಫ್
ಮುನಾಫ್

ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿದ ಸಂಭ್ರಮದ ನಡುವೆ ಇಲ್ಲಿನ ಮುಸ್ಲಿಂ ಕಲಾವಿದ ಮುನಾಫ್ ಹರ್ಲಾಪುರ ರಾಮನ ಪಾದ ಮತ್ತು ಹನುಮನ ಚಿತ್ರಬಿಡಿಸಿ ರಾಮಜಪ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.

ದೇಶದೆಲ್ಲೆಡೆ ಶ್ರೀರಾಮನ ಜಪ, ತಪ ನಡೆಯುತ್ತಿದೆ. ಅದೇ ರೀತಿ ಮುನಾಫ್ ಹರ್ಲಾಪುರ ಕೂಡ ರಾಮನ ಜಪ ಮಾಡಿ ಗಮನ ಸೆಳೆದರು. ಇವರು ಶ್ರೀರಾಮನ ಭಕ್ತನಾಗಿದ್ದು, ಚರ್ತುಭುಜ ಮಂಡಲದ‌ಲ್ಲಿ ಶ್ರೀ ರಾಮನ ಪಾದಗಳಿಗೆ ಆಂಜನೇಯ ನಮಸ್ಕರಿಸುವ ಕಲಾ ರಚನೆ ರಚಿಸಿ ಭಕ್ತಿಗೆ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮ೦ದಿರ ನಿಮಾ೯ಣ ಸಮಾರ೦ಭದ ಭೂಮಿ ಪೂಜೆ ನಡೆಸುತ್ತಿದ್ದಾಗಲೇ ಮುಸ್ಲಿಂ ಕಲಾವಿದ ತನ್ನ ಮನೆಯಲ್ಲಿ ಚಿತ್ರಗಳನ್ನು ಬಿಡಿಸಿ ತನ್ನ ಕಲೆಯನ್ನು ಅಭಿವ್ಯಕ್ತಪಡಿಸಿದ್ದಾರೆ. 

ಮಂಡಲದ ಮಧ್ಯೆ ರಾಮನ ಪಾದಗಳ‌ ಚಿತ್ರ ಬಿಡಿಸಿ, ಸುತ್ತಲು ಜೈಶ್ರೀರಾಮ್ ಎಂದು ಬರೆದು ಸಂಭ್ರಮಿಸಿದರು. ಯಾವುದೇ ಧರ್ಮದ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಯಾ ದೇವರ ಚಿತ್ರಗಳನ್ನು ಬಿಡಿಸುವ ಮೂಲಕ ನಾವೆಲ್ಲಾ ಒಂದೇ ಎಂಬ ಏಕತೆಯ ಸಂದೇಶ ಸಾರುತ್ತಾ ಬ೦ದಿರುವುದು ಮುನಾಫ್ ಹರ್ಲಾಪುರ್ ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com