ಮೈಸೂರು: ಲಕ್ಷಣರಹಿತ ಸೋಂಕು ಹಿನ್ನೆಲೆ ಹೋಂ ಐಸೋಲೇಷನ್ ಆಯ್ಕೆ ಮಾಡಿಕೊಂಡ ಶೇ.62ರಷ್ಟು ಮಂದಿ!

ಲಕ್ಷಣರಹಿತ ಹಾಗೂ ಸೌಮ್ಯ ರೋಗ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಶೇ.62ರಷ್ಟು ಮಂದಿ ಆಸ್ಪತ್ರೆ ಬದಲಿಗೆ ಮನೆಗಳಲ್ಲಿಯೇ ಐಸೋಲೇಷನ್ ನಲ್ಲಿರುವ ಆಯ್ಕೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಲಕ್ಷಣರಹಿತ ಹಾಗೂ ಸೌಮ್ಯ ರೋಗ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಶೇ.62ರಷ್ಟು ಮಂದಿ ಆಸ್ಪತ್ರೆ ಬದಲಿಗೆ ಮನೆಗಳಲ್ಲಿಯೇ ಐಸೋಲೇಷನ್ ನಲ್ಲಿರುವ ಆಯ್ಕೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಮೈಸೂರಿನಲ್ಲಿ ಆಗಸ್ಟ್ 5ರವರೆಗೂ 3,579 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದ್ದು, ಇದರಲ್ಲಿ 2,227 ಮಂದಿ ಹೋಂ ಐಸೋಲೇಷನ್ ನಲ್ಲಿರುವುದಾಗಿ ತಿಳಿಸಿದ್ದಾರೆ. 240 ಮಂದಿ ಕೋವಿಡ್ ಚಿಕಿತ್ಸೆ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 87 ಮಂದಿ ಕೋವಿಡ್ ಆರೋಗ್ಯ ಕೇಂದ್ರ, 776 ಕೋವಿಡ್ ಕೇರ್ ಸೆಂಟರ್, 201 ಮಂದಿ ಖಾಸಗಿ ಆಸ್ಪತ್ರೆಗಳು, 48 ಮಂದಿ ಕೋವಿಡ್ ಖಾಸಗಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬಹುತೇಕ ಮಂದಿ ಹೋಂಐಸೋಲೇಷನ್ ನಲ್ಲಿರುವ ಆಯ್ಕೆಯನ್ನೇ ಆಯ್ದುಕೊಂಡಿದ್ದು, ಇದರಿಂದ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾದಂತಾಗಿದೆ. ಅಲ್ಲದೆ, ತೀವ್ರ ಸೋಂಕಿನಿಂದ ಬಳಲುತ್ತಿರುವವರಿಗೆ ಹಾಸಿಗೆ ಹಾಗೂ ತುರ್ತು ಚಿಕಿತ್ಸೆ ನೀಡಲು ಸಹಾಯಕವಾಗಿದೆ. 

ಇದರ ನಡುವಲ್ಲೂ ಬಹುತೇಕ ಮಂದಿ ಹೋಂ ಐಸೋಲೇಷನ್ ನಲ್ಲಿರುವುದಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದರೂ ಜನರು ಮಾಹಿತಿ ನೀಡದೇ ಹೋದರಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ. 

ಹೋಂ ಐಸೋಲೇಷನ್ ನಲ್ಲಿ ಈವರೆಗೂ ಯಾವುದೇ ಸಾವುಗಳಾಗಿರುವ ಒಂದೂ ವರದಿಯಾಗಿಲ್ಲ. ಕೆಲ ಪ್ರಕರಣಗಳಲ್ಲಿ ಸೋಂಕು ಹೆಚ್ಚಾದ ಕಾರಣ ಆಸ್ಪತ್ರೆಗಳಿಗೆ ದಾಖಲಾಗಿರುವುದು ಕಂಡು ಬಂದಿದೆ. 

ಡಿಸಿ ಅಬಿರಾಮ್ ಜಿ ಶಂಕರ್ ಅವರು ಮಾತನಾಡಿ, ಜನರು ಹೋಂ ಐಸೋಲೇಷನ್ ನಲ್ಲಿರುವ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಇದು ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ದಾರಿ ಮಾಡಿಕೊಟ್ಟಂತಾಗಿದೆ. ರಿಯಲ್ ಟೈಮ್ ಬೆಡ್ ಡಾಟಾ ಕುರಿತು ಈಗಲೂ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಸೌಮ್ಯ ರೋಗ ಲಕ್ಷಣ ಇರುವುದರಿಂದ, ಐಸೋಲೇಷನ್ ನಲ್ಲಿರುವಂತೆ ತಿಳಿಸಿದ್ದರು. ಹೀಗಾಗಿ ನಾನು ಹೋಂ ಐಸೋಲೇಷನ್ ನಲ್ಲಿರಲು ನಿರ್ಧರಿಸಿದ್ದೆ. ಮಾರ್ಗಸೂಚಿಗಳನ್ನು ಅನುಸರಿಸಿದರೆ ಗುಣಮುಖನಾಗುತ್ತೇನೆಂದು ಹೇಳಿದ್ದಾರೆ. ವೈದ್ಯರು ನನಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಕಷ್ಟು ಜನರು ಹೋಮ್ ಐಸೋಲೇಷನಲ್ಲಿರಲು ಮುಂದಾಗಿದ್ದಾರೆ. ಆದರೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸೋಂಕಿತರ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com