ಮೆಟ್ರೋ ರೈಲು ಸೇವೆ ಸದ್ಯಕ್ಕೆ ಇಲ್ಲ: ಆದರೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಿಎಂಆರ್ ಸಿಎಲ್

ಮೆಟ್ರೋ ರೈಲು ಸೇವೆ ಯಾವಾಗ ಪುನರ್ ಆರಂಭಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಮಾತುಗಳು ಕೇಳಿಬರುತ್ತಿಲ್ಲವಾದರೂ, ಬಿಎಂಆರ್ ಸಿಎಲ್ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮೆಟ್ರೋ ರೈಲು
ಮೆಟ್ರೋ ರೈಲು

ಬೆಂಗಳೂರು: ಮೆಟ್ರೋ ರೈಲು ಸೇವೆ ಯಾವಾಗ ಪುನರ್ ಆರಂಭಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಮಾತುಗಳು ಕೇಳಿಬರುತ್ತಿಲ್ಲವಾದರೂ, ಬಿಎಂಆರ್ ಸಿಎಲ್ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

40 ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ನಿಲ್ಲಲು ಹಳದಿ ಟೇಪ್ ನೊಂದಿಗೆ  ಗುರುತುಗಳನ್ನು ಹಾಕಲಾಗಿದೆ.ಅಂತೆಯೇ ರೈಲಿನ ಒಳಗಡೆಯೂ ಇದೇ ರೀತಿಯ ಗುರುತುಗಳನ್ನು ಹಾಕಲಾಗಿದೆ.ಆಸನಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸುವ ಸ್ಟಿಕರ್ ಗಳನ್ನು ಅಂಟಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿಎಂಆರ್ ಸಿಎಲ್  ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ
ಕಾರ್ಯಕಾರಿ ನಿರ್ದೇಶಕ ಎ.ಎಸ್. ಶಂಕರ್, ರೈಲು ಸೇವೆ ಆರಂಭಿಸಲು ಪೂರ್ಣ ಸಿದ್ಧರಿದ್ದೇವೆ. ಆರು ಕೋಚ್ ಗಳ ರೈಲಿನಲ್ಲಿ ಕೇವಲ 346 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು, ಪ್ರತಿನಿತ್ಯ ಓಡಾಡುವ ರೈಲುಗಳಿಗೆ ಉತ್ತಮ ಸುರಕ್ಷತೆ ಒದಗಿಸಲಾಗುವುದು, ಮೊದಲ ಹಂತದಲ್ಲಿ ಲಭ್ಯವಿರುವ ಸಿಬ್ಬಂದಿಯೊಂದಿಗೆ 50 ರೈಲುಗಳನ್ನು ಓಡಿಸಲಾಗುವುದು ಎಂದರು.

ಎಲ್ಲಾ ಇಲಾಖೆಗಳಲ್ಲಿ ಸುಮಾರು 700 ಮೆಟ್ರೋ ಸಿಬ್ಬಂದಿಗಳಿದ್ದು, ಅವರನ್ನು ಬಿಬಿಎಂಪಿಯಿಂದ ಕೋವಿಡ್ ಡ್ಯೂಟಿಗೆ ನಿಯೋಜಿಸಲಾಗಿದೆ.ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿದೆ.ರೈಲಿನ ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರ  ಸುರಕ್ಷತೆಗಾಗಿ ಈ ಆ್ಯಪ್ ಅಗತ್ಯವಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸೇತು ಆ್ಯಪ್ ನ್ನು ಕಡ್ಡಾಯ ಮಾಡಲು ಮೆಟ್ರೋ ಉದ್ದೇಶಿಸಿರುವುದಾಗಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು.

ಮುಂದೆ ಕೂಡಾ ಆಗಾಗ್ಗೆ ರೈಲುಗಳು ಬರುತ್ತವೆ. ಶೇ.15ರಿಂದ 20 ರಷ್ಟು ಸಾಮರ್ಥ್ಯದೊಂದಿಗೆ ಅವುಗಳು ಕಾರ್ಯಾ ನಿರ್ವಹಿಸಲಿವೆ. ಪ್ರಯಾಣ ಕಾರ್ಡ್ ಪಾವತಿ ಮಾತ್ರ ಸ್ವೀಕರಿಸಲಾಗುವುದು ಎಂದು ಅವರು ಹೇಳಿದರು. 

ಟೋಕನ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸಹಜ ಪರಿಸ್ಥಿತಿವೇರ್ಪಟ್ಟ ನಂತರ ಅವುಗಳನ್ನು ಪುನರ್ ಆರಂಭಿಸಲಾಗುವುದು ಈವರೆಗೂ ಮೆಟ್ರೋ ಸೇವೆ ಪುನರ್ ಆರಂಭಿಸಲು ಕೇಂದ್ರಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿಲ್ಲ. ಶೀಘ್ರದಲ್ಲಿಯೇ ಸೇವೆ ಆರಂಭಿಸಲು ಎದುರು ನೋಡುತ್ತಿಲ್ಲ,ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಹಿರಿಯ ಅಧಿಕಾರಿ ಶಂಕರ್  ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com