ಬೆಂಗಳೂರು-ಮೈಸೂರು ನಡುವೆ ಮತ್ತೊಂದು ಏರ್ ಪೋರ್ಟ್ ಸ್ಥಾಪಿಸಲು ಸಲಹೆ

ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮತ್ತೊಂದು ವಿಮಾನ ನಿಲ್ದಾಣ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುವಂತೆ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮತ್ತೊಂದು ವಿಮಾನ ನಿಲ್ದಾಣ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸುವಂತೆ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ವರದಿ ತಿಳಿಸಿದೆ.

ನಮ್ಮ ವಿಶ್ಲೇಷಣೆಯ ಪ್ರಕಾರ ಎರಡನೇ ವಿಮಾನ ನಿಲ್ದಾಣ ಬೆಂಗಳೂರು ಮತ್ತು ಮೈಸೂರಿನ ನಡುವೆ  ಸ್ಥಾಪಿಸ ಬೇಕಾಗಿದೆ, ಆರ್ಥಿಕ ಬೆಳವಣಿಗೆ ಮತ್ತು ಜನಸಂಖ್ಯಾ ವಿಭಜನೆಗಳು ಮತ್ತು ಬೇಡಿಕೆಯ ಸಾಮರ್ಥ್ಯಕ್ಕನುಗುಣದ ಆಧಾರದ ಮೇಲೆ ಸ್ಥಾಪಿಸಬೇಕಾಗಿದೆ ಎಂದು ಹೇಳಿದೆ, ಇದರಿಂದ ಮೈಸೂರು, ಹಾಸನ, ಕೊಡಗು ಮತ್ತು ಹಾರೊಹಳ್ಳಿಯಲ್ಲಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.

ಮೂಲಸೌಕರ್ಯವು ಉದ್ಯಮ ಮತ್ತು ಹೂಡಿಕೆಯ ಪ್ರಮುಖ ಅಂಶವಾಗಿರುವುದರಿಂದ ಎರಡನೇ ವಿಮಾನ ನಿಲ್ದಾಣವು ನಗರವನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ, ಇದರ ಜೊತೆಗೆ ಆದರೆ ಉದ್ಯಮವು ಹೊರಗಿನ ಪ್ರದೇಶಗಳ ಕಡೆಗೆ ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಸಮತೋಲಿತ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

ತಳಮಟ್ಟದ ಸವಾಲುಗಳ ಬಗ್ಗೆ ಗಮನ ಹರಿಸಿದರೇ ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಶೀಘ್ರವೇ ನಿರ್ದಾರ ತೆಗೆದುಕೊಳ್ಳಬೇಕೆಂದು ಬಿಸಿಐಸಿ ಅಭಿಪ್ರಾಯ ಪಟ್ಟಿದೆ, ಭೂಸ್ವಾಧೀನ ಮತ್ತು ಅಭಿವೃದ್ಧಿ, ಪರಿಸರ ಸಮಸ್ಯೆಗಳು, ರಸ್ತೆ ಮತ್ತು ರೈಲು ಸಂಪರ್ಕ ಸೌಲಭ್ಯದ ಬಗ್ಗೆ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.  ಸ್ಥಳೀಯ ಸಮಸ್ಯೆಗಳು ಪ್ರಮುಖ ಸವಾಲಾಗಿವೆ.

ಎರಡನೇ ವಿಮಾನ ನಿಲ್ದಾಣವು ಸ್ವತಂತ್ರವಾಗಿರಬೇಕು ಮತ್ತು ಅವರು (BIAL ಮತ್ತು ಹೊಸ ವಿಮಾನ ನಿಲ್ದಾಣ) ಪರಸ್ಪರ ಪ್ರಾಮಾಣಿಕವಾಗಿ ಸ್ಪರ್ಧಿಸಬೇಕು ಎಂದು ಬಿಸಿಐಸಿ ಮಾಜಿ ಅಧ್ಯಕ್ಷ ದರ್ವೇಶ್ ಅಗರ್ ವಾಲ್ ಹೇಳಿದ್ದಾರೆ. 

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯತೆ ಮತ್ತು ಕಾರ್ಯಸಾಧ್ಯತೆಯನ್ನು ಬಿಸಿಐಸಿ ತಿಳಿಸಿದೆ. ಬಿಸಿಐಸಿ ಸದಸ್ಯರು ತಾವು ಕೆಲಸ ಮಾಡುತ್ತಿರುವ ವರದಿಯ ಬಗ್ಗೆ ತಮ್ಮೊಂದಿಗೆ ಚರ್ಚಿಸಿದ್ದು, ಈ ಸಂಬಂಧ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸ್ಯಾಚುರೇಟೆಡ್ ಆಗಿರುವುದರಿಂದ ಸರ್ಕಾರವು ಈಗ ಎರಡನೇ ವಿಮಾನ ನಿಲ್ದಾಣದ ಯೋಜನೆಯನ್ನು ಪ್ರಾರಂಭಿಸುವುದು 2020-31 ರೊಳಗೆ ಸ್ಥಾಪಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com