ವಿದೇಶಗಳಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿದ್ದೀರಾ?: 50 ನಕಲಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಿ!

ನಕಲಿ ವಿದೇಶಿ ನೇಮಕಾತಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ವಲಸಿಗರ ರಕ್ಷಣೆ ಕಚೇರಿ ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ಕರ್ನಾಟಕದಲ್ಲಿ ಇಂತಹ ಸುಮಾರು 50 ನಕಲಿ ವಿದೇಶಿ ನೇಮಕಾತಿ ಸಂಸ್ಥೆಗಳಿವೆ ಎಂದು ಹೇಳಿದ್ದು ವಿದೇಶಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ಆಸೆಯಲ್ಲಿರುವವರಿಗೆ ಮೋಸ ಮಾಡುವುದೇ ಇಂತಹ ಸಂಸ್ಥೆಗಳ ಕೆಲಸವಾಗಿದೆ ಎಂದು ಅದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ನಕಲಿ ವಿದೇಶಿ ನೇಮಕಾತಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ವಲಸಿಗರ ರಕ್ಷಣೆ ಕಚೇರಿ ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ಕರ್ನಾಟಕದಲ್ಲಿ ಇಂತಹ ಸುಮಾರು 50 ನಕಲಿ ವಿದೇಶಿ ನೇಮಕಾತಿ ಸಂಸ್ಥೆಗಳಿವೆ ಎಂದು ಹೇಳಿದ್ದು ವಿದೇಶಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ಆಸೆಯಲ್ಲಿರುವವರಿಗೆ ಮೋಸ ಮಾಡುವುದೇ ಇಂತಹ ಸಂಸ್ಥೆಗಳ ಕೆಲಸವಾಗಿದೆ ಎಂದು ಅದು ಹೇಳಿದೆ.

ನಿಜವಾದ ಅಸಲಿ ವಿದೇಶಿ ನೇಮಕಾತಿ ಸಂಸ್ಥೆಗಳು ಯಾವುವು ಎಂಬ ವಿವರಗಳು emigrate.gov.in ವೆಬ್ ಸೈಟ್ ನಲ್ಲಿದ್ದು ಅವುಗಳ ಮೂಲಕವೇ ಜನರು ಕೆಲಸಗಳನ್ನು ಹುಡುಕಬೇಕು ಎಂದು ಕಚೇರಿ ಹೇಳಿದೆ.

50 ನಕಲಿ ಸಂಸ್ಥೆಗಳಲ್ಲಿ 17 ಮಂಗಳೂರಿನಲ್ಲಿ, 11 ಬೆಂಗಳೂರಿನಲ್ಲಿ, ನಾಲ್ಕು ಬೆಳಗಾವಿ, 3 ಶಿವಮೊಗ್ಗದಲ್ಲಿ, ಎರಡು ಹಾಸನದಲ್ಲಿ, ತಲಾ ಒಂದು ಧಾರವಾಡ, ಉಡುಪಿ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲದೆ 9 ಇತರ ಅನಧಿಕೃತ ವಿದೇಶಿ ನೇಮಕಾತಿ ಸಂಸ್ಥೆಗಳು ರಾಜ್ಯಾದ್ಯಂತ ಇವೆ. ಇನ್ನೂ ಹಲವು ಇರಬಹುದು, ಅವು ಬೆಳಕಿಗೆ ಬರಬೇಕಿದೆ ಎಂದು ಅಧಿಕೃತ ಮೂಲಗಳು ತಿಳಿಸುತ್ತವೆ.

ಇಂತಹ ಹಲವು ಅನಧಿಕೃತ ಏಜೆನ್ಸಿಗಳು ಉದ್ಯೋಗಾಕಾಂಕ್ಷಿಗಳಿಂದ ಪ್ರತಿ ದಾಖಲಾತಿಗೆ 5 ಸಾವಿರ ರೂಪಾಯಿಯಂತೆ ಹಣವನ್ನು ಪೀಕುತ್ತವೆ. ವಿದೇಶದಲ್ಲಿ ಯಾರ ಹೆಸರಿನಲ್ಲಿ,ಯಾರಿಗೆ ಹಣ ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ಹಣವನ್ನು ಮೂರನೇ ವ್ಯಕ್ತಿಯ ಹೆಸರಿನಲ್ಲಿ ನಗದು ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡಲಾಗುತ್ತದೆ.

ವಲಸೆ ಕಾಯ್ದೆ ಪ್ರಕಾರ, ದಾಖಲಾತಿ ಹೊಂದಿರುವ ಸಂಸ್ಥೆಗಳು ಪ್ರತಿ ವ್ಯಕ್ತಿಯಿಂದ 30 ಸಾವಿರ ರೂಪಾಯಿಯವರೆಗೆ ಶುಲ್ಕ ಪಡೆಯಬಹುದು. ಆದರೆ ಅನಧಿಕೃತ ಸಂಸ್ಥೆಗಳು ಅದಕ್ಕಿಂತ ದುಪ್ಪಟ್ಟು ಹಣವನ್ನು ಕೀಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com