ನಷ್ಟ ಪರಿಹಾರಗೊಳ್ಳಲು ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಸರ್ಕಾರ ಗಂಭೀರ ಚಿಂತನೆಯಲ್ಲಿದೆ: ಗೃಹ ಸಚಿವ

ರಾಜ್ಯದಲ್ಲಿ ಕೊರೋನಾ, ಪ್ರವಾಹ ಹಾಗೂ ಗಲಭೆ ಪ್ರಕರಣಗಳಂತಹ ಸಮಸ್ಯೆಗಳು ತಲೆದೋರಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 
ಗೃಹ ಸಚಿವ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ
Updated on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ, ಪ್ರವಾಹ ಹಾಗೂ ಗಲಭೆ ಪ್ರಕರಣಗಳಂತಹ ಸಮಸ್ಯೆಗಳು ತಲೆದೋರಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ, ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವ, ಪೊಲೀಸರ ಕೊರತೆ ನೀಗಿಸುವ, ಕೊರೋನಾ ಸಂದರ್ಭದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ. 

ಮುಂಬರುವ ಬಿಬಿಎಂಪಿ ಚುನಾವಣೆಗೂ ಬೆಂಗಳೂರು ಗಲಭೆಗೂ ಸಂಪರ್ಕ ಕಲ್ಪಿಸಿಸಿದ್ದಿರಿ...? 
ವೋಟ್‌ಬ್ಯಾಂಕ್‌ಗಾಗಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಪೈಪೋಟಿಗಳು ನಡೆಯುತ್ತಿದ್ದು, ಇದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ರಾಜ್ಯದಲ್ಲಿರುವ ಕೆಲ ಪಕ್ಷಗಳು ಭಿನ್ನವಾಗಿ ಸ್ಥಳೀಯ ಸಂಸ್ಥೆಗಳನ್ನು ನಿಯಂತ್ರಿಸಲು ಎಸ್'ಡಿಪಿಐ ಸಿದ್ಧಾಂತಗಳನ್ನು ಹೇರಲು ಯತ್ನಿಸುತ್ತಿವೆ. 

ಮೈಸೂರಿನಲ್ಲಿರುವ ನರಸಿಂಹರಾಜರ ಎರಡು ಕಾಂಗ್ರೆಸ್ ಕ್ಷೇತ್ರಗಳು ಹಾಗೂ ಬೆಂಗಳೂರಿನ ಪುಲಿಕೇಶಿನಗರಗಳಲ್ಲಿ ಎಸ್'ಡಿಪಿಐ ತನ್ನ ಹಿಡಿತ ಸಾಧಿಸಲು ಹೊರಡಿದೆ ಎಂಬುದು ನಿಮ್ಮ ಮಾತಿನ ಅರ್ಥವೇ?
ಪ್ರಸ್ತುತ ಬೆಂಗಳೂರಿನಲ್ಲಿ ನಡೆದಿರುವ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇದರ ಬಗ್ಗೆ ನಾನೇಕೆ ಮಾತನಾಡಿಲಿ.

ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಎಷ್ಟು ಸಮಯ ಬೇಕು? 
ಸುಪ್ರೀಂಕೋರ್ಟ್ ರೂಪಿಸಿರುವ ನಿಯಮ ಹಾಗೂ ಪ್ರಕ್ರಿತೆಗಳನ್ನು ಅನುಸರಿಸಲಾಗುತ್ತದೆ. ನಷ್ಟ ಪರಿಹರಿಸಿಕೊಳ್ಳುವ ಪ್ರಕ್ರಿಯೆ ಪ್ರಸ್ತುತ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರನ್ನು ಗುರ್ತಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡುವವರಿಗೆ ಈ ಮೂಲಕ ಕಠಿಣ ಸಂದೇಶ ರವಾನಿಸುತ್ತಿದ್ದೇವೆ.

ಗಲಭೆ ಹಿಂದೆ ಗುಂಪುಗಳನ್ನು ನಿಷೇಧಿಸುವಂತೆ ಹೇಳಿದ್ದಿರಿ...ಪ್ರಮುಖವಾಗಿ ಪಿಎಫ್ಐ ಬಗ್ಗೆ ಹೇಳಿದ್ದಿರಿ...?
ಈ ಬಗ್ಗೆ ಹಲವು ರಾಜ್ಯಗಳು ಹಾಗೂ ಕೇಂದ್ರೀಯ ಸಂಸ್ಥೆಗಳೂ ಕೂಡ ಚಿಂತನೆ ನಡೆಸುತ್ತಿವೆ. ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಇಂತಹ ಗುಂಪಿನಲ್ಲಿರುವ ವ್ಯಕ್ತಿಗಳು ಹೆಸರುಗಳು, ರೂಪಗಳು ಹಾಗೂ ಗುರುತುಗಳನ್ನು ಬದಲಿಸುತ್ತಿದ್ದಾರೆ. ಆದರೆ, ನಮ್ಮ ಅಧಿಕಾರಿಗಳು ಫೀಲ್ಟ್ ನಲ್ಲಿದ್ದು, ಪೊಲೀಸರ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 

ಮೈಸೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಗಲಭೆ ಸಂದರ್ಭದಲ್ಲಿಯೂ ಮುಖ್ಯಮಂತ್ರಿಗಳು ಕಳೆದ ನವೆಂಬರ್ ತಿಂಗಳಿನಲ್ಲಿ ಎಸ್'ಡಿಪಿಐ ಕೈವಾಡ ಕುರಿತು ಮಾತನಾಡಿದ್ದರು. ಬಳಿಕ ಶಾಸಕ ತನ್ವೀರ್ ಸೇಟ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲೂ ಇದೇ ಸಂಘಟನೆ ಹೆಸರು ಕೇಳಿ ಬಂದಿತ್ತು. ಇದೀಗ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲೂ ಕೇಳಿ ಬರುತ್ತಿದೆ. ಸಂಘಟನೆ ಚುನಾವಣಾ ಆಯೋಗದಲ್ಲಿ ದಾಖಲು ಮಾಡಿಕೊಂಡಿದೆ. ಈ ಸಂಘಟನೆಯನ್ನು ನಿಷೇಧ ಮಾಡಲು ಸಾಧ್ಯವೇ? 
ಸಿಎಂ ಯಡಿಯೂರಪ್ಪ ಅವರು ಹೇಳಿದ್ದು ಸರಿಯಿದೆ. ಇದಕ್ಕೆ ಎಫ್ಐಆರ್ ಹಾಗೂ ಚಾರ್ಜ್ ಶೀಟ್ ಗಳೇ ಸಾಕ್ಷ್ಯಗಳಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಏನೂ ಇಲ್ಲ. ಶೀಘ್ರದಲ್ಲೇ ಸಂಘಟನೆ ನಿಷೇಧ ಕುರಿತು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆಯಲಾಗುತ್ತದೆ. ನಂತರ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸು ಮಾಡಲಿದ್ದಾರೆ. 

ಗಲಭೆ ವೇಳೆ ಪೊಲೀಸರ ಸಿದ್ಧತೆಗಳು ಹಾಗೂ ಭದ್ರತಾ ಸಿಬ್ಬಂದಿಗಳ ಶಕ್ತಿ ಕೊರತೆ ಎದ್ದು ಕಾಣಿಸಿತ್ತು...? 
ಜನಸಂಖ್ಯೆಯ ಸಾಂದ್ರತೆಯನ್ನು ಪರಿಗಣಿಸಿ ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಪೊಲೀಸರಿಗೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಜ್ಞರೂ ಕ್ರಮಗಳನ್ನು ಸೂಚಿಸಿದ್ದು, ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಸಿಬ್ಬಂದಿಗಳ ಕೊರತೆಗಳಿವೆ ಎಂದು ಪೊಲೀಸರು ದೂರುತ್ತಿದ್ದಾರೆ...?
ಇದು ಸತ್ಯ... ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಉಳಿದಿವೆ. ಈಗಾಗಲೇ ನಾವು 6,000 ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದೇವೆ. ಮುಂದಿನ 3 ವರ್ಷಗಳಲ್ಲಿ 18,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 

ಕೊರೋನಾ ಸಂದರ್ಭದಲ್ಲಿ ಪೊಲೀಸರು ಎದುರಿಸುತ್ತಿರುವ ಸವಾಲುಗಳಾವುದು? 
ಕೊರೋನಾ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವರಿಗೆ ಕೊರೋನಾ ಪಾಸಿಟಿವ್ ಬಂದ್ದಿದ್ದರೆ, ಮತ್ತೆ ಕೆಲವರು ಸಂಪರ್ಕದಲ್ಲಿದ್ದ ಕಾರಣಕ್ಕೆ ಈ ವರೆಗೂ 3000 ಪೊಲೀಸರು ಕ್ವಾರಂಟೈನ್'ಗೊಳಗಾಗಿದ್ದಾರೆ. ಒಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದರೂ ಇಡೀ ಪೊಲೀಸ್ ಠಾಣೆಯನ್ನೇ ಸೀಲ್ಡೌನ್ ಮಾಡಲಾಗುತ್ತಿದೆ. ಆದರೆ, ಕೆಲ ದಿನಗಳ ಬಳಿಕ ಮತ್ತೆ ಪೊಲೀಸರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಪೊಲೀಸ ಇಲಾಖೆಯಲ್ಲಿ ನೈತಿಕ ಸ್ಥೈರ್ಯ ಹೆಚ್ಚಾಗಿದೆ. 

ಸೈಬರ್ ಕ್ರೈಮ್ ಮಟ್ಟ ಹಾಕುವಲ್ಲಿ ಎಷ್ಟರ ಮಟ್ಟಿಗೆ ಗಂಭೀರವಾಗಿದ್ದೀರಿ? 
ಪ್ರತೀ ಜಿಲ್ಲೆಯಲ್ಲಿಯೂ ಸೈಬರ್ ಪೊಲೀಸ್ ಠಾಣೆಯಿದೆ. ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಇತರೆ ಪ್ರದೇಶಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಒಂದರಲ್ಲಿಯೇ 8 ಠಾಣೆಗಳಿವೆ. ಐಟಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ತಜ್ಞರು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೈಬರ್ ಕ್ರೈಮ್ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇಯ ಬ್ಯಾಂಕ್ ಹಾಗೂ ಇತರೆ ತಜ್ಞರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಲಾಗುತ್ತದೆ. 

ಪೊಲೀಸರ ಮುಂದಿನ ಹಾದಿ ಯಾವುದು?
ಜನಸ್ನೇಹಿ ಪೊಲೀಸ್ ಪಡೆಗಳಾಗಿರಬೇಕು. ಪ್ರಕರಣಗಳನ್ನು ಬೇಧಿಸುವ ಹಾದಿ ಉತ್ತಮವಾಗಿರಬೇಕು. ಯಾವಾಗಲೂ ಸುಧಾರಣಾ ಪ್ರಯತ್ನ ಮಾಡಲು ನಾವು ಬಯಸುತ್ತೇವೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com