ಮಂಗಳೂರು: ಮೌಲಾನಾ ಆಜಾದ್ ಭವನದಲ್ಲಿ ಕಲ್ಲುತೂರಾಟ, ಆರು ಮಂದಿ ಬಂಧನ

ಪಾಂಡೇಶ್ವರದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಕಚೇರಿಯನ್ನು ಒಳಗೊಂಡಿರುವ ಮೌಲಾನಾ ಆಜಾದ್ ಭವನದಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.
ಮಂಗಳೂರು: ಮೌಲಾನಾ ಆಜಾದ್ ಭವನದಲ್ಲಿ ಕಲ್ಲುತೂರಾಟ, ಆರು ಮಂದಿ ಬಂಧನ
Updated on: 

ಮಂಗಳೂರು: ಪಾಂಡೇಶ್ವರದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಕಚೇರಿಯನ್ನು ಒಳಗೊಂಡಿರುವ ಮೌಲಾನಾ ಆಜಾದ್ ಭವನದಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.

ಗೂಡ್‌ಶೆಡ್‌ನ ಧನರಾಜ್ ಶೆಟ್ಟಿ (21), ಎಮ್ಮೆಕೆರೆಯ ಸುಶಾಂತ್ (20), ಕಂದುಕದ ಕಾರ್ತಿಕ್ ಶೆಟ್ಟಿ (26), ಶಂಕರ್ ಬಂಗೇರಾ (20), ಮನೀಶ್ ಪುತ್ರನ್ (20) ಮತ್ತು ಅಪ್ರಾಪ್ತ ವಯಸ್ಕರು ಬಂಧಿತರು. 

ಅಪ್ರಾಪ್ತ ವಯಸ್ಕನಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಇತರರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

ಕೆಲವು ಅಪರಿಚಿತ ದುಷ್ಕರ್ಮಿಗಳು ಆಗಸ್ಟ್ 13 ರ ಮಧ್ಯರಾತ್ರಿ ಮೌಲಾನಾ ಆಜಾದ್ ಭವಾನದಲ್ಲಿ ಕಲ್ಲು ತೂರಾಟ ನಡೆಸಿದರು ಮತ್ತು ಕಟ್ಟಡದ ಮೊದಲ ಮಹಡಿಯ ಕಿಟಕಿ ಗಾಜನ್ನು  ಹಾನಿಗೊಳಿಸಿದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com