ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಆಪ್ತಸಹಾಯಕ ಬಂಧನ

48 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 48 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
    
ಗಲಭೆಕೋರರಿಗೆ ನೆರವು ನೀಡಿದ ಆರೋಪದ ಮೇಲೆಗೆ ಸಂಪತ್ ಆಪ್ತ ಸಹಾಯಕ ಅರುಣ್ ನನ್ನು ಸಿಸಿಬಿ ಪೊಲೀಸರು ಈ ಹಿಂದೆ ವಶಕ್ಕೆ ಪಡೆದುಕೊಂಡಿದ್ದರು. ಆಪ್ತನ ಬಂಧನ ಬೆನ್ನಲ್ಲೇ ಸಂಪತ್'ಗೆ ಭೀತಿ ಶುರುವಾಗಿದೆ. 

ಡಿಜೆ ಹಳ್ಳಿ-ಕೆಜಿ ಹಳ್ಳಿಯಲ್ಲಿ ಆ.11 ರಂದು ದೊಂಬಿಕೋರರಿಗೆ ಸಂಪತ್ ರಾಜ್ ಸೂಚನೆ ಮೇಲೆರೆ ಅರುಣ್ ನೆರವು ನೀಡಿದ್ದ. ಅಂದು ಗಲಭೆ ಮುನ್ನ ಹಾಗೂ ನಂತರ ಎಸ್'ಡಿಪಿಐ ಮುಖಂಡರಾದ ಮುಜಾಮಿಲ್ ಪಾಷ, ಅಯಾಜ್ ಹಾಗೂ ಅಫ್ನಾನ್ ಸೇರಿದಂತೆ ಕೆಲವರ ಜೊತೆ ಮೊಬೈಲ್'ನಲ್ಲಿ ಅರುಣ್ ನಿರಂತರ ಸಂಪರ್ಕದಲ್ಲಿದ್ದ. ಈ ಬಗ್ಗೆ ಆತನತ ಮತೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಖಚಿತ ಮಾಹಿತಿ ಸಿಕ್ಕಿತು. ಅಲ್ಲದೆ, ತಮ್ಮ ಮೇಲಿನ ದಾಳಿ ಹಿಂದೆ ಸಂಪತ್ ಹಾಗೂ ಆತನ ಆಪ್ತ ಸಹಾಯಕ ಅರುಣ್ ಇದ್ದರು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅರುಣ್'ನನ್ನು ಬಂಧನ ಪ್ರಕ್ರಿಯಗೊಳಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎನ್'ಜಿಒ ಹೆಸರಲ್ಲಿ ಯುವಕರ ನೇಮಕ ಮಾಡಿಕೊಳ್ಳುತ್ತಿದ್ದ ಸಮೀವುದ್ದೀನ್
ಕೆಜಿ ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ಸಮೀವುದ್ದೀನ್ ಮತ್ತಷ್ಟು ಕರಾಳ ಮುಖ ಹೊರಬರುತ್ತಿದೆ.

ಭಯೋತ್ಪಾದಕ ಸಂಘಟನೆಗೆ ಸ್ವಯಂ ಸೇವಾ ಸಂಸ್ಥೆ ಹೆಸರಿನಲ್ಲಿ ಗೌಪ್ಯವಾಗಿ ಹೊಸ ಸದಸ್ಯರ ನೇಮಕಾತಿಗೆ ಬಂಧಿತ ಆರೋಪಿ ಸಮೀವುದ್ದೀನ್ ಯತ್ನಿಸಿದ್ದ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸಮೀವುದ್ದೀನ್ ನಗರದ ಹೆಚ್'ಬಿಆರ್ ಲೇಔಟ್ ನಲ್ಲಿ ಪತ್ನಿ ಜೊತೆಗೆ ಎನ್'ಜಿಒ ನಡೆಸುತ್ತಿದ್ದ. ಈ ಸಂಸ್ಥೆಗೆ ವಿದೇಶದಿಂದ ಕೂಡ ಅಪಾರ ಪ್ರಮಾಣದ ದೇಣಿಗೆ ಹರಿದು ಬಂದಿದೆ. ಸಾಮಾಜಿಕ ಚಟುವಟಿಕೆಗಳ ಸೋಗಿನಲ್ಲಿ ಯುವಕರನ್ನು ಸಂಘಟನೆಗೆ ಸೆಳೆಯಲು ಸಮೀವುದ್ದೀನ್ ಮುಂದಾಗಿರಬಹುದು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com