ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಒಳ ಮೀಸಲಾತಿ: ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಲು ಎಚ್ ಡಿಕೆ ಒತ್ತಾಯ 

ಒಳಮೀಸಲಾತಿ "ಸರ್ವರಿಗೂ ಸಮಪಾಲು ಸಮಬಾಳು" ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ  ರಾಜ್ಯ ಸರ್ಕಾರ  ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
Published on

ಬೆಂಗಳೂರು: ಒಳಮೀಸಲಾತಿ "ಸರ್ವರಿಗೂ ಸಮಪಾಲು ಸಮಬಾಳು" ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ  ರಾಜ್ಯ ಸರ್ಕಾರ  ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತುಳಿತಕ್ಕೊಳಗಾದ ಎಲ್ಲಾ  ಜಾತಿಗಳಿಗೂ ಮೀಸಲಾತಿಯ ಫಲ ದಕ್ಕಬೇಕು ಎಂಬ ಸುಪ್ರೀಂ ಕೋರ್ಟಿನ ಆಶಯ ಒಳಮೀಸಲಾತಿಯ ಪರವಾದ ನಿಲುವೇ ಆಗಿದ್ದು, ಅದನ್ನು ಜಾರಿಗೊಳಿಸುವುದು ಸಾಮಾಜಿಕ ನ್ಯಾಯದ  ಪರಿಪಾಲನೆಯ ಕರ್ತವ್ಯವಾಗುತ್ತದೆ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಮೇಲ್ಜಾತಿಯಲ್ಲಿನ ಬಡವರಿಗೆ  ಶೇ.10ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಕೇಂದ್ರದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಲ್ಲಿನ ಅವಕಾಶ ವಂಚಿತರಿಗೆ  ಒಳಮೀಸಲಾತಿ ಜಾರಿಗೆ ತರಬಾರದೇಕೆ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಸ್ವತಃ ಹಿಂದುಳಿದವರ್ಗದವರೇ ಆಗಿರುವ ಪ್ರಧಾನಿಗಳು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವ ಮೂಲಕ ಸಮಬಾಳು-ಸಮಪಾಲು ಎಂಬ ತತ್ವವನ್ನು ಎತ್ತಿಹಿಡಿಯಬೇಕಾಗಿದೆ. ಶೋಷಿತ ವರ್ಗದಲ್ಲೂ ಸ್ಪೃಶ್ಯ ಸಮುದಾಯ ಅಸ್ಪೃಶ್ಯರನ್ನು ಹತ್ತಿರ ಬಿಟ್ಟು ಕೊಳ್ಳದ ಪರಿಸ್ಥಿತಿ ಈಗಲೂ ಇದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com