ಕೋವಿಡ್ ಭಯದಿಂದ ಗರ್ಭಧಾರಣೆ ಮುಂದೂಡುತ್ತಿರುವ ದಂಪತಿಗಳು!

 34 ವರ್ಷ ವಯಸ್ಸಿನ ಸಹಾನಾ (ಹೆಸರನ್ನು ಬದಲಾಯಿಸಲಾಗಿದೆ) ಎರಡು ವಾರಗಳ ಹಿಂದೆ ತಾನು ಗರ್ಭಪಾತ ಮಡಿಸಿಕೊಂಡಿದ್ದಾರೆ.  ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಕಾರಣ ಕೋವಿಡ್ ಭಯವಾಗಿದೆ! “ನಾನು ಗರ್ಭಿಣಿ ಎಂದು ತಿಳಿದ ತಕ್ಷಣಗರ್ಭಪಾತ ಮಾಡಿಸಿಕೊಂಡೆ. ಕೋವಿಡ್ ಸಾಂಕ್ರಾಮಿಕ ಎಲ್ಲೆಡೆ ಇರುವ ಕಾರಣ . ಈಗ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಹೋಗುವುದು ಅಪಾಯಕಾರಿ. , ಒಂಬತ್ತು ತಿಂಗಳ ನಂತ
ಕೋವಿಡ್ ಭಯದಿಂದ ಗರ್ಭಧಾರಣೆ ಮುಂದೂಡುತ್ತಿರುವ ದಂಪತಿಗಳು!

ಬೆಂಗಳೂರು: 34 ವರ್ಷ ವಯಸ್ಸಿನ ಸಹಾನಾ (ಹೆಸರನ್ನು ಬದಲಾಯಿಸಲಾಗಿದೆ) ಎರಡು ವಾರಗಳ ಹಿಂದೆ ತಾನು ಗರ್ಭಪಾತ ಮಡಿಸಿಕೊಂಡಿದ್ದಾರೆ.  ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಕಾರಣ ಕೋವಿಡ್ ಭಯವಾಗಿದೆ! “ನಾನು ಗರ್ಭಿಣಿ ಎಂದು ತಿಳಿದ ತಕ್ಷಣಗರ್ಭಪಾತ ಮಾಡಿಸಿಕೊಂಡೆ. ಕೋವಿಡ್ ಸಾಂಕ್ರಾಮಿಕ ಎಲ್ಲೆಡೆ ಇರುವ ಕಾರಣ . ಈಗ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಹೋಗುವುದು ಅಪಾಯಕಾರಿ. , ಒಂಬತ್ತು ತಿಂಗಳ ನಂತರ ಪರಿಸ್ಥಿತಿ ಹೇಗಿರಲಿದೆ ಎಂದು ಊಹಿಸುವುದು ಸಹ ಕಷ್ಟ.  ನವಜಾತ ಶಿಶುವಿಗೆ ಸೋಂಕು ತಗಲುವ ಅಪಾಯವಿದೆ, ”ಎಂದು ಅವರು ಹೇಳಿದರು.

ಕೋವಿಡ್ ಕಾರಣದಿಂದಾಗಿ ತನ್ನ ಕುಟುಂಬದ ಆರ್ಥಿಕ ಸ್ಥಿತಿಯ ಹಿನ್ನೆಲೆ ಇನ್ನೋರ್ವ ಮಹಿಳೆ ಝುಹಾ ಜುನೈದಿ ಸಹ 2020 ರಲ್ಲಿತಾವು ಗರ್ಭಧಾರಣೆ ಮಾಡುವ ನಿರ್ಧಾರದಿಂದ ದೂರ ಸರಿದಿದ್ದಾರೆ. ಒಂದೊಮ್ಮೆ ಗರ್ಭಿಣಿಯಾದರೆ ತನಗೂ, ಮಗುವಿಗೂ ಅಪಾಯ ಎಂದು ಆಕೆ ಭಾವಿಸಿದ್ದರು. "ಲಸಿಕೆಗಾಗಿ ಕ್ಲಿನಿಕಲ್ ಪ್ರಯೋಗಕ್ಕಾಗಿ ಮೆಡಿಕಲ್ ಇಂಟರ್ವೆನ್ಶನ್ ಗಳನ್ನು  ತರಾತುರಿಯಲ್ಲಿ ಮಾಡಲಾಗುತ್ತಿದೆ ಮತ್ತು ಇದು ಕಳವಳಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಈ ಸ್ಥಿತಿಯಲ್ಲಿ ಸರ್ಕಾರ ಏನು ಮಾಡುತ್ತಿದೆ ಮತ್ತು ಕೋವಿಡ್ ಅನ್ನು ಎದುರಿಸಲು ನಡೆಯುತ್ತಿರುವ ಪ್ರಕ್ರಿಯೆಗಳ ಸ್ಪಷ್ಟ ಕಲ್ಪನೆಯನ್ನು ನಾವು ಕಂಡುಕೊಂಡ ನಂತವಷ್ಟೇ ನಾನು ಗರ್ಭಧಾರಣೆ ಬಗ್ಗೆ ತೀರ್ಮಾನಿಸುತ್ತೇನೆ" ಝುಹಾ ಹೇಳಿದ್ದಾರೆ.

"30ರ ಹರೆಯದ ಮಧ್ಯಭಾಗದಲ್ಲಿರುವ ಯುವ ದಂಪತಿಗಳಲ್ಲಿ ಎರಡನೇ ಮಗುವನ್ನು ಬಯಸುವ ಸಮಯವಿದಾಗಿದೆ.  ಆದರೆ ಕೊರೋನಾ ಕಾರಣದಿಂಡಾಗಿ  ಅದನ್ನು ಒಂದು ವರ್ಷದವರೆಗೆ ಮುಂದೂಡಲು ನಿರ್ಧರಿಸಲಾಗಿದೆ. ಅವರು ಗರ್ಭಪಾತ, ಗರ್ಭನಿರೋಧಕ ಮಾತ್ರೆ  ಐಯುಡಿ (ಗರ್ಭಾಶಯದ ಸಾಧನಗಳು) ಗಳ ಮೊರೆ ಹೋಗಿದ್ದಾರೆ. ಐಯುಡಿ ಮತ್ತು ಎಂಡಿಂಗ್ ಗಾಗಿ  ಅವರು ಆಸ್ಪತ್ರೆಗೆ ಭೇಟಿ ನೀಡಬೇಕಾಗಿದೆ ಮತ್ತು ಆನ್‌ಲೈನ್ ಪ್ರಿಸ್ಕ್ರಿಪ್ಷನ್ ಸಹಾಯದಿಂದ ಗರ್ಭ ನಿರೋಧಕಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ”ಎಂದು  ಮದರ್ ಹುಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಮಧುಶ್ರೀ ವಿಜಯಕುಮಾರ್ ಹೇಳಿದರು.

ಆದರೆ ಟೆಲಿ-ಸಮಾಲೋಚನೆ ಮತ್ತು ಟೆಲಿ-ಕೌನ್ಸೆಲಿಂಗ್ ಲಭ್ಯವಿರುವುದರಿಂದ ಕೋವಿಡ್ ಸಮಯದಲ್ಲಿ ಪೋಷಕರು ವೈದ್ಯಕೀಯ ಆರೈಕೆಯ ಬಗೆಗೆ  ಚಿಂತಿಸಬೇಕಾಗಿಲ್ಲ. ಮಗುವನ್ನು ಪರೀಕ್ಷಿಸಲು ತಾಯಂದಿರು ಕೇವಲ ಮೂರರಿಂದ ನಾಲ್ಕು ಬಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಗುತ್ತದೆ ಎಂದು ಡಾ.ಮಧುಶ್ರೀ ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ದಂಪತಿಗಳು ಮನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವುಉದರಿಂಡ ಮಕ್ಕಳನ್ನು ಪಡೆಯುವುದನ್ನು ಮುಂಡೂಡಲು ಅವರು ಬಯಸುತ್ತಾರೆ. ಏಕೆಂಡರೆ ಹೆಚ್ಚಾಗಿ ಮನೆಯಿದಲೇ ಕೆಲಸ ಮಾಡುವ ಅವಕಾಶವಿರುತ್ತದೆ.  ಕೆಲವು ದಂಪತಿಗಳು ತಮ್ಮ ಸಂತಾನೋತ್ಪತ್ತಿ ವಯಸ್ಸಿನ ಕೊನೆಯಲ್ಲಿರಬಹುದು, ಆದರೆ ಮಗುವಿನ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದಾರೆ ಎಂದು ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ್ತಿ ಡಾ. ಗಾಯತ್ರಿ ಕಾಮತ್ ಹೇಳಿದ್ದಾರೆ.

"ನಾವು ಸಾಂಕ್ರಾಮಿಕದ ಕೆಲವೇ ತಿಂಗಳನ್ನು ಕಳೆದಿದ್ದೇವೆ. ಹಾಗೂ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಕೊರೋನಾವೈರಸ್ ಮಗುವಿನ ಮೇಲೆ ಪರಿಣಾಮ ಬೀರಬಹುದೆಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ. ಮೂರನೇ ತ್ರೈಮಾಸಿಕದಲ್ಲಿ, ತಾಯಿಯ ರೋಗನಿರೋಧಕ ಶಕ್ತಿ ಕಡಿಮೆ. ಆಆಗಿರಲಿದೆ. ಒಂದೊಮ್ಮೆ ತಮ್ಮ ಗರ್ಭಧಾರಣೆಯನ್ನು ಕೊನೆಗೊಳಿಸಬೇಕೇ ಎಂದು ದಂಪತಿಗಳು ನನ್ನನ್ನು ಕೇಳಿದಾಗ, ಸಾಂಕ್ರಾಮಿಕ ಸಮಯದಲ್ಲಿ ಗರ್ಭಿಣಿಯಾಗುವುದು ಅಪಾಯಕಾರಿ ಅಥವಾ ಗರ್ಭಧಾರಣೆಯನ್ನು ಕೊನೆಗೊಳಿಸಬೇಕು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನಾವು ಅವರಿಗೆ ಹೇಳುತ್ತೇವೆ ”

“ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿರಲು ನಾವು ಅವರಿಗೆ ಹೇಳುತ್ತೇವೆ, ಅವರು ಮಗುವನ್ನು ಹೊಂದಲು ಎಷ್ಟು ಸಮಯ ವಿಳಂಬ ಮಾಡಬಹುದು, ಸಾಂಕ್ರಾಮಿಕ ರೋಗವು ಎಷ್ಟು ಕಾಲ ಉಳಿಯುತ್ತದೆ ಎಂದು ನಮಗೆ ತಿಳಿದಿಲ್ಲ. ಯೋಜಿತ ಗರ್ಭಧಾರಣೆಯನ್ನು ಮಾಡುವುದು ಹಾಗೂ ಸುರಕ್ಷಿತವಾಗಿರಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ, ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com