ಮಂಗಳೂರು ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ, ಉಳಿದವರಿಗಾಗಿ ಶೋಧ ಮುಂದುವರಿಕೆ

ನಿನ್ನೆ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎನ್ನುವವರ ಮೃತದೇಹಗಳು ಪತ್ತೆಯಾಗಿದೆ. 
ಮಂಗಳೂರು ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ, ಉಳಿದವರಿಗಾಗಿ ಶೋಧ ಮುಂದುವರಿಕೆ
Updated on: 

ಮಂಗಳೂರು: ನಿನ್ನೆ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ.

ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎನ್ನುವವರ ಮೃತದೇಹಗಳು ಪತ್ತೆಯಾಗಿದೆ. 

ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ದೋಣಿ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು.

ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ. 

ದೋಣಿ ಮುಳುಗುವಾಗ ಅದರಲ್ಲಿ 25ಮೀನುಗಾರರು ಇದ್ದರು. ಈ ಪೈಕಿ ಆರು ಮಂದಿ ನಾಪತ್ತೆಯಾಗಿದ್ದರು. ಉಳಿದವರ ರಕ್ಷಣೆ ಮಾಡಲಾಗಿತ್ತು. 

ಇನ್ನು ನಾಪತ್ತೆಯಾಗಿರುವ ಪ್ರೀತಂ, ಝಿಯಾವುಲ್ಲಾ, ಅನ್ಸಾರ್ ಹಾಗೂ ಹಸೈನಾರ್ ಎನ್ನುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com