ಮಂಗಳೂರು: ಸಮುದ್ರದಲ್ಲಿ ದೋಣಿ ಮುಳುಗಿ ಆರು ಜನ ನಾಪತ್ತೆ, 16 ಮಂದಿಯ ರಕ್ಷಣೆ

ಮಂಗಳೂರು: ಸಮುದ್ರದಲ್ಲಿ ದೋಣಿ ಮುಳುಗಿ ಆರು ಜನ ನಾಪತ್ತೆ, 16 ಮಂದಿಯ ರಕ್ಷಣೆ

ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಆಳ ಸಮುದ್ರದ ಮೀನುಗಾರಿಕೆ ದೋಣಿ ಸಮುದ್ರದಲ್ಲಿ ಮುಳುಗಿದ ಪರಿಣಾಮ. ಆರು ಮೀನುಗಾರರು ನಾಪತ್ತೆಯಾಗಿದ್ದು, 16 ಮಂದಿಯನ್ನು ರಕ್ಷಿಸಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಸಮೀಪ ಉಳ್ಳಾಲದಲ್ಲಿ ನಡೆದಿದೆ.

ಮಂಗಳೂರು: ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಆಳ ಸಮುದ್ರದ ಮೀನುಗಾರಿಕೆ ದೋಣಿ ಸಮುದ್ರದಲ್ಲಿ ಮುಳುಗಿದ ಪರಿಣಾಮ. ಆರು ಮೀನುಗಾರರು ನಾಪತ್ತೆಯಾಗಿದ್ದು, 16 ಮಂದಿಯನ್ನು ರಕ್ಷಿಸಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಸಮೀಪ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲದಿಂದ ಪಶ್ಚಿಮಕ್ಕೆ ಕೆಲವು ನಾಟಿಕಲ್ ಮೈಲು ದೂರದಲ್ಲಿ ಬೋಳಾರದ ಪ್ರಶಾಂತ್ ಎನುವವರ ಮಾಲಿಕತ್ವದ "ಶ್ರೀರಕ್ಷಾ" ಹೆಸರಿನ ಮೀನುಗಾರಿಕೆ ದೋಣಿ ಮುಳುಗಿದೆ.  22 ಮೀನುಗಾರರೊಂದಿಗೆ ದೋಣಿ ಸೋಮವಾರ ಮುಂಜಾನೆ 5 ಗಂಟೆಗೆ ಕಡಲ ತೀರದಿಂದ ಹೊರಟಿದೆ. ಇಡೀ ದಿನ ಮೀನುಗಾರಿಕೆ ಕೈಗೊಂಡ ನಂತರ, ಮಂಗಳವಾರ ಬೆಳಿಗ್ಗೆ ತೀರಕ್ಕೆತಲುಪುವ ನಿರೀಕ್ಷೆ ಇತ್ತು.  ಆದರೆ ಹಾಗಾಗದ ಕಾರಣ ದೋಣಿಯ ಮಾಲೀಕರು ದೋಣಿಯಲ್ಲಿದ್ದವರನ್ನು ವೈರ್‌ಲೆಸ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಹಾಗೆ ಸಂಪರ್ಕ ಸಾಧ್ಯವಾಗಿಲ್ಲ.

ಅನುಮಾನಗೊಂಡ ಮಾಲೀಕರು ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇತರೆ ದೋಣಿಗಳ ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ.  ಅಲ್ಲದೆ ಅವರ ದೋಣಿಉಯನ್ನು ಹುಡುಕಲು ಹೇಳಿದ್ದಾರೆ. ದೋಣಿಗಾಗಿ ಹುಡುಕುತ್ತಿದ್ದ ಇತರ ಮೀನುಗಾರಿಕಾ ದೋಣಿಗಳು ಒಂದು ಜಾಗದಲ್ಲಿ ಚಿಕ್ಕ ದೋಣಿಯನ್ನು ಕಂಡಿದೆ. ಅಲ್ಲಿಂದ, ಕೆಲವು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 16 ಜನರು ಧಿಂಗಿ (ಒಂದು ಬಗೆಯ ಸಣ್ಣ ದೋಣಿ, ಇದನ್ನು ಲೈಫ್ ಬೋಟ್ ಅಥವಾ ಟೆಂಡರ್ ಆಗಿ ಬಳಸಲಾಗುತ್ತದೆ) ಯ ಸಹಾಯದಿಂದ ಬದುಕುಳಿದಿದ್ದಾರೆ. ಮೀನುಗಾರರು ತಕ್ಷಣ ಅಲ್ಲಿಗೆ ಹೋಗಿ ಅವರನ್ನು ರಕ್ಷಿಸಿದರು.

ಆ ಸಮಯದಲ್ಲಿ, ಅಪಾಯಕ್ಕೆ ಸಿಕ್ಕಿರುವ ದೋಣಿಯಲ್ಲಿದ್ದ ಆರು ಮಂದಿ ನಾಪತ್ತೆಯಾಗಿರುವುದನ್ನು ಬದುಕುಳಿದವರು ಹೇಳಿದ್ದಾರೆ.  ಭಾರೀ ಪ್ರಮಾಣದಲ್ಲಿ ಮೀನು ಸಿಕ್ಕಿದ್ದು ಬಲವಾದ ಗಾಳಿಯ ಪರಿಣಾಮ ದೋಣಿ ಸಮತೋಲನ ಕಳೆದುಕೊಂಡು ಮುಳುಗಿದೆ ಎಂದು ತಿಳಿದುಬಂದಿದೆ. ಕ್ಯಾಬಿನ್‌ನಲ್ಲಿದ್ದವರಿಗೆ ಧಿಂಗಿ  ದೊರಕಿಲ್ಲ ಅಲ್ಲದೆ ಗಾಳಿಯ ಕಾರಣ ಈಜಿ ದಡಕ್ಕೆ ಬರಲೂ ಆಗಲಿಲ್ಲ. ಹಾಗಾಗಿ ಅವರ ಬದುಕುಳಿಯುವ ಸಾಧ್ಯತೆಗಳು ಮಂಕಾಗಿವೆ ಎಂದು ಭಾವಿಸಲಾಗಿದೆ. 

ಸಧ್ಯ ಸ್ಥಳದಲ್ಲಿರುವ , ಇತರ ಮೀನುಗಾರಿಕೆ ದೋಣಿಗಳು ಪಾರುಗಾಣಿಕಾ ಕಾರ್ಯಾಚರಣೆ ನಡೆಸಿದೆ. ಕಾಣೆಯಾದ ದೋಣಿಗಾಗಿ ಹುಡುಕುತ್ತಿರುವ ಮೀನುಗಾರರು ದೋಣಿಯ ಯಾವುದೇ ಭಾಗವನ್ನು ಸಮುದ್ರದ ನೀರಿನ ಮೇಲೆ ಕಾಣದ ಕಾರಣ ದೋಣಿ ಮುಳುಗಿದಂತೆ ತೋರುತ್ತದೆ ಎಂದು ಹೇಳಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com