ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ! 6 ವಿಶೇಷ ಉಪನಗರ ರೈಲುಗಳಿಗೆ ರೈಲ್ವೆ ಮಂಡಳಿ ಅನುಮೋದನೆ

ಬೆಂಗಳೂರು ಮತ್ತು ಸುತ್ತಮುತ್ತ ಪ್ರಯಾಣಿಸಲು ಬಯಸುವವರಿಗೆ ಸಿಹಿಸುದ್ದಿ! ನೈಋತ್ಯ ರೈಲ್ವೆ ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲಿದೆ. ನೈಋತ್ಯ ರೈಲ್ವೆ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿ ಬುಧವಾರ ಅನುಮೋದನೆ ಸಿಕ್ಕಿದೆ.
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ! 6 ವಿಶೇಷ ಉಪನಗರ ರೈಲುಗಳಿಗೆ ರೈಲ್ವೆ ಮಂಡಳಿ ಅನುಮೋದನೆ

ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತ ಪ್ರಯಾಣಿಸಲು ಬಯಸುವವರಿಗೆ ಸಿಹಿಸುದ್ದಿ! ನೈಋತ್ಯ ರೈಲ್ವೆ ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲಿದೆ. ನೈಋತ್ಯ ರೈಲ್ವೆ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿ ಬುಧವಾರ ಅನುಮೋದನೆ ಸಿಕ್ಕಿದೆ.

ಪ್ರಸ್ತಾವಿತ ಆರು ಜೋಡಿ ಉಪನಗರ ರೈಲುಗಳು ವಾರದಲ್ಲಿ ಆರು ದಿನ ಓಡುತ್ತವೆ: ಯಶವಂತಪುರ--ಹೊಸೂರು- ಯಶವಂತಪುರಮೆಮು ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06547/06548), ಯಶವಂತಪುರ ತುಮಕೂರು- ಯಶವಂತಪುರ ಡೆಮು ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06553/06554), ಬೆಂಗಳೂರು ನಗರ-ಮಾರಿಕುಪ್ಪಮ್-ಬೆಂಗಳುರು ನಗರ ಮೆಮುವಿಶೇಷ (ರೈಲು ಸಂಖ್ಯೆ 06555/06556),  ಬಂಗಾರಪೇಟೆ-ಮೈಸೂರು-ಬಂಗಾರಪೇಟೆ ಮೆಮು ಎಕ್ಸ್ ಪ್ರೆಸ್ಸ್ ವಿಶೇಷ (ರೈಲು ಸಂಖ್ಯೆ 06557/06558), ಹಿಂದೂಪುರ-ಯಶವಂತಪುರ-ಹಿಂದೂಪುರ ಮೆಮು ಎಕ್ಸ್ ಪ್ರೆಸ್ ವಿಶೇಷ(ರೈಲು ಸಂಖ್ಯೆ 06563/06564) ಮತ್ತು ಯಶವಂತಪುರ-ಹಾಸನ-ಯಶವಂತಪುರ ಡೆಮು ಎಕ್ಸ್ ಪ್ರೆಸ್ ವಿಶೇಷ (ರೈಲು ಸಂಖ್ಯೆ 06579/06580).

ಬೆಂಗಳೂರು ನಗರ ಮತ್ತು ತಾಳಗುಪ್ಪ ಯಶವಂತಪುರಮತ್ತು ಹಾಸನ, ಕೆಎಸ್ಆರ್ ಬೆಂಗಳೂರು ಮತ್ತು ಧಾರವಾರ್ ನಡುವಿನ ಮೂರು ಇಂಟರ್ಸಿಟಿ ವಿಶೇಷ ಜೋಡಿ ರೈಲನ್ನು ಪ್ರತಿದಿನ ನ ಓಡಿಸಲಾಗುವುದು. ಓಡಬೇಕಾದ ಇತರ ರೈಲು ಜೋಡಿಗಳ ಪೈಕಿ ಕೆಎಸ್ಆರ್ ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ (ವಾರದಲ್ಲಿ 4 ದಿನಗಳು), ನಾಂದೇಡ್ ಮತ್ತು ಮೀರಜ್ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com