ಹಸೆಮಣೆ ಏರಬೇಕಿದ್ದ ಮದುಮಗ ಹೃದಯಾಘಾತದಿಂದ ಸಾವು

ಇಂದು ಹಸೆಮಣೆ ಏರಬೇಕಿದ್ದ ಮದುಮಗ ಹೃದಯಘಾತದಿಂದ ಮೃತಪಟ್ಟಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಹೃದಯ ಸಮಸ್ಯೆ
ಹೃದಯ ಸಮಸ್ಯೆ
Updated on

ರಾಯಚೂರು: ಇಂದು ಹಸೆಮಣೆ ಏರಬೇಕಿದ್ದ ಮದುಮಗ ಹೃದಯಘಾತದಿಂದ ಮೃತಪಟ್ಟಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಹುಲುಗಪ್ಪ ಬುದ್ದಿನ್ನಿ(36) ಮೃತ ದುರ್ದೈವಿ. ಮೃತರು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯತಿಯಲ್ಲಿ  ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್(ಎಸ್‍ಡಿಎ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 

ಇಂದು ಸಿಂಧನೂರು ತಾಲುಕಿನ ಗೋರೆಬಾಳ ಗ್ರಾಮದ ಶರಣ ಬಸವೇಶ್ವರ ದೇಗುಲದಲ್ಲಿ ಹುಲಗಪ್ಪ ಅವರ ಮದುವೆ ನಿಗದಿ ಆಗಿತ್ತು. ಇಂದು ಮದುವೆ ಆಗಬೇಕಾಗಿದ್ದ ವರ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಹುಲುಗಪ್ಪ ಏಕಾಏಕಿ ಹೃದಯಾಘಾತದಿಂದ  ಸಾವನ್ನಪ್ಪಿದ್ದಾರೆ. ವರನ ಸಾವಿನಿಂದ ಜವಳಗೇರಾ ಗ್ರಾಮದಲ್ಲಿ ಮದುವೆ ಸಂಭ್ರಮದಲ್ಲಿರ ಬೇಕಾದ ಊರಲ್ಲಿ ಸೂತಕದ ವಾತಾರಣವಿದೆ. ಹುಲುಗಪ್ಪನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ  ನಡೆದಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com