
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತಂತೆ ಕೆ.ಎಸ್.ಆರ್.ಪಿ., ಎಡಿಜಿಪಿ ಆಗಿರುವ ಅಲೋಕ್ ಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು "ಸೋಂಕನ್ನು ನಾನು ಸಕಾರಾತ್ಮಕವಾಗಿ ಕಾಣುತ್ತೇನೆ. ಜೀವನ ಏನೂ ಅಲ್ಲ, ಅನುಭವಗಳ ಆಗರ.
"ನನ್ನ ಚಿಕಿತ್ಸೆ ನಡೆಯುತ್ತಿದ್ದು ಇಂತಹಾ ಸಂದರ್ಭದಲ್ಲಿಯೂ ನನ್ನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುತ್ತಿರುವ ನನ್ನ ಕುಟುಂಬದವರಿಗೆ ನಾನು ಆಭಾರಿ. ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಎಲ್ಲರಿಗೆ ವಂದನೆಗಳು" ಎಂದು ಹೇಳಿದ್ದಾರೆ.
Advertisement