ಪ್ರಾಣಿಗಳಿಗೆ ಗೋ ಮಾಂಸ? ಗೋ ಹತ್ಯೆ ನಿಷೇಧ ಕಾಯ್ದೆ ಸ್ಪಷ್ಟತೆ ಬಗ್ಗೆ ಕಾಯುತ್ತಿರುವ ರಾಜ್ಯ ಮೃಗಾಲಯಗಳು!

ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರಗಳ ಸಂರಕ್ಷಣೆ ಮಸೂದೆ 2020 ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ರಾಜ್ಯದಲ್ಲಿರುವ ಮೃಗಾಲಯಗಳು ಆತಂಕಕ್ಕೊಳಗಾಗಿವೆ. ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಯಾವ ರೀತಿಯ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂಬುದನ್ನು ಕಾಯುತ್ತಿವೆ. 
ಹುಲಿ ಚಿತ್ರ
ಹುಲಿ ಚಿತ್ರ

ಬೆಂಗಳೂರು: ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರಗಳ ಸಂರಕ್ಷಣೆ ಮಸೂದೆ 2020 ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ರಾಜ್ಯದಲ್ಲಿರುವ ಮೃಗಾಲಯಗಳು ಆತಂಕಕ್ಕೊಳಗಾಗಿವೆ. ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಯಾವ ರೀತಿಯ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂಬುದನ್ನು ಕಾಯುತ್ತಿವೆ. 

ಈ ಹಿಂದೆ ಇದು ಹಸುಗಳನ್ನು ನಿರ್ದಿಷ್ಟಪಡಿಸಿತು. ಈಗ ಅದು ಎಲ್ಲಾ ಜಾನುವಾರುಗಳನ್ನು ಒಳಗೊಂಡಿದೆ. ಆದಾಗ್ಯೂ, ಪಶು ವೈದ್ಯಾಧಿಕಾರಿಗಳಿಂದ ಪ್ರಮಾಣೀಕರಿಸಲ್ಪಟ್ಟ ಮತ್ತು ಅನಾರೋಗ್ಯಕ್ಕೊಳಗಾದ 13 ವರ್ಷಕ್ಕೂ ಮೇಲ್ಪಟ್ಟ ಹಾಗೂ 12 ವರ್ಷಕ್ಕಿಂತ ಕೆಳಗಿನ ಎತ್ತುಗಳು ಮತ್ತು ಎಮ್ಮೆಗಳ ಹತ್ಯೆಗೆ ವಿನಾಯಿತಿ ನೀಡಲಾಗಿದೆ.

ಮಾಂಸಾಹಾರಿ ಪ್ರಾಣಿಗಳಿಗೆ  ಗೋಮಾಂಸವನ್ನು ಸಂಗ್ರಹಿಸುವಾಗ ನಾವು ಇದೇ ರೀತಿಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಹಾಲು ಕರೆಯುವ ಹಸುಗಳನ್ನು ಸಂಗ್ರಹಿಸುತ್ತಿರಲಿಲ್ಲ. ಎಮ್ಮೆ ಮತ್ತು ಎತ್ತುಗಳಿಗೆ ಟೆಂಡರ್ ನೀಡಿ ಅಂತಿಮಗೊಳಿಸಲಾಯಿತು. ಇದನ್ನು ಈಗಲೂ ಅನುಸರಿಸಲಾಗುವುದು. ಆದಾಗ್ಯೂ, ಸರ್ಕಾರದಿಂದ ಅಂತಿಮ ಹೇಳಿಕೆಗೆ ಕಾಯುತ್ತಿರುವುದಾಗಿ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹುಲಿ, ಸಿಂಹ ಮತ್ತು ಚಿರತೆಯ ಆಹಾರಕ್ಕಾಗಿ ಪ್ರತಿನಿತ್ಯ ದೊಡ್ಡ ಪ್ರಮಾಣದ ಹಸುವಿನ ಮಾಂಸ ಬೇಕಾಗುತ್ತದೆ. ಪ್ರಮಾಣೀಕೃತ ಪೂರೈಕೆದಾರರಿಂದ ಎಲ್ಲಾ ಮೃಗಾಲಯಗಳಿಗೂ ಹಸು ಮಾಂಸ ಪೂರೈಕೆಯಾಗುತ್ತದೆ. ಬನ್ನೇರುಘಟ್ಟ ವನ್ಯಜೀವಿ ಪಾರ್ಕ್ ಗೆ ನಿತ್ಯ ಸುಮಾರು 600 ಕೆಜಿ, ಮೈಸೂರು ಮೃಗಾಲಯಕ್ಕೆ ನಿತ್ಯ ಸುಮಾರು 350 ಕೆಜಿ ಹಸುವಿನ ಮಾಂಸದ ಅಗತ್ಯವಿದೆ.
ನೂತನ ಮಸೂದೆಯಿಂದ ಕೆಲ ಅನಿಶ್ಚಿತತೆ ತಲೆದೋರಿದೆ. ಆದರೆ, ಈ ಶಾಸನ ರಚನೆ ಬಗ್ಗೆ ಪ್ರತಿಕ್ರಿಯಿಸಿಲ್ಲ, ಉತ್ತರಿಸಲಾಗದ ಅನೇಕ ಪ್ರಶ್ನೆಗಳಿವೆ. ಇದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಮಾಣೀಕರಣ ವಿಧಾನದ ಬಗ್ಗೆ ಮೃಗಾಲಯ ಪ್ರಾಧಿಕಾರ ಮತ್ತು ಪಶುಸಂಗೋಪನಾ ಇಲಾಖೆ ಕಳವಳ ವ್ಯಕ್ತಪಡಿಸಿವೆ. ಇದರಿಂದ ಅಕ್ರಮ ಹತ್ಯೆಗಳು ಹೆಚ್ಚಾಗುತ್ತವೆ ಎಂದು ಅವರು ತಿಳಿಸಿದ್ದಾರೆ.  ಹೊಸ ಮಸೂದೆ, 1964 ರ ತಿದ್ದುಪಡಿಯಲ್ಲಿ ಒಂದಾಗಿದ್ದು,ಏನು ಹತ್ಯೆ ಮಾಡಬಹುದು ಮತ್ತು ಯಾವುದನ್ನು ವಿನಾಯಿತಿ ನೀಡಬಹುದು ಎಂಬುದನ್ನು ನಿರ್ದಿಷ್ಟಪಡಿಸಲಾಗುವುದು,  ಹಿಂದಿನ ವಿನಾಯಿತಿಗಳು ಮುಂದುವರಿಯುತ್ತವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವಾಣ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com