
ಬೆಂಗಳೂರು: ಡಾ. ಕೆ. ಕಸ್ತೂರಿ ರಂಗನ್ ವರದಿಯನ್ವಯ ರಾಜ್ಯದಲ್ಲಿನ ಪಶ್ಚಿಮಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೊಳಪಡುತ್ತಿರುವ ೧೫೩೩ ಗ್ರಾಮಗಳ ಜನರ ಹಿತಾಸಕ್ತಿ ಕಾಪಾಡಲು ಸರಕಾರ ಬದ್ಧವಾಗಿದ್ದು, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಗುರುವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯರಾದ ವಿ. ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ಕೆ. ಜಿ. ಬೋಪಯ್ಯ, ಎಂ. ಪಿ. ಕುಮಾರಸ್ವಾಮಿ ಹಾಗೂ ಕುಮಾರ್ ಬಂಗಾರಪ್ಪ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂದಿಸಿದಂತೆ ಅರಣ್ಯ ಸಚಿವರ ಪರವಾಗಿ ಅವರು ಉತ್ತರ ನೀಡಿದರು. ಕೇಂದ್ರ ಸರಕಾರವು ಕಸ್ತೂರಿ ರಂಗನ್ ವರದಿಗೆ ಸಂಬಂದಿಸಿದಂತೆ ೨೦೧೮ರ ಅ. ೩ರಂದು ನಾಲ್ಕನೆ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ, ಈವರೆಗೆ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಈ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಪತ್ರ ಬರೆದು ಕೋರಿದ್ದಾರೆ. ಅಲ್ಲದೆ, ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದ್ದು, ಈ ತಿಂಗಳ ಅಂತ್ಯದೊಳಗೆ ಸಮಿತಿಯು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ)ವು ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಹೊರಡಿಸಿರುವ ಆದೇಶದ ಕುರಿತು ಕಾನೂ ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ವರದಿಯನ್ನು ನಾವು ಯಾವ ರೀತಿ ಅಳವಡಿಸಿಕೊಳ್ಳಬಹುದು, ಜೊತೆಗೆ ಯಾವುದೆ ಗ್ರಾಮ ವನ್ನು ಒಕ್ಕಲೆಬ್ಬಿಸದಂತೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಕಲ್ಪಿಸುವುದು ಹೇಗೆ ಎಂಬುದರ ಬಗ್ಗೆ ಸರಕಾರದ ವತಿಯಿಂ ದ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಸ್ತೂರಿ ರಂಗನ್ ವರದಿಯಿಂದ ಆತಂಕಕ್ಕೆ ಒಳಗಾಗಿರುವ ಆ ಭಾಗ ದ ಜನರು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಅವರಲ್ಲಿರುವ ಆತಂಕವನ್ನು ದೂರ ಮಾಡಬೇಕಾದ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ತಮ್ಮ ಸಂಕಷ್ಟಗಳನ್ನು ಪರಿಹರಿಸುವಂತಹ ಜನಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಬೇಕು. ಅದಕ್ಕಾಗಿ ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನರು ಪಾಲ್ಗೊಳ್ಳಬೇಕು. ಚುನಾವಣೆಯನ್ನು ಬಹಿಷ್ಕರಿಸುವುದು ಪರಿಹಾರವಲ್ಲ. ಸಮ ಸ್ಯೆಯನ್ನು ಬಗೆಹರಿಸಲು ಈ ಸದನದ ಎಲ್ಲ ಸದಸ್ಯರು ಸೇರಿ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸುನೀಲ್ ಕುಮಾರ್, ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಎಂದು ನಮ್ಮ ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹಸಿರು ನ್ಯಾಯಾಧೀಕರಣವು ಡಿ. ೩೦ರೊಳಗೆ ವರದಿಯನ್ನು ಜಾರಿ ಮಾಡುವಂತೆ ಆದೇಶ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು.
ಅವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ವಲಯದ ಸರ್ವೆ ಕಾರ್ಯ ನಡೆದಿದೆ. ಕೃಷಿ ಚಟುವಟಿಕೆ ನಡೆಯುವ ಪ್ರದೇಶವನ್ನು ಅರಣ್ಯ ಎಂದು ಪರಿಗ ಣಿಸಲಾಗಿದೆ. ಪಶ್ಚಿಮಘಟ್ಟಗಳ ಸಂರಕ್ಷಣೆಗೆ ನಮ್ಮ ವಿರೋಧವಿಲ್ಲ. ಅದರೆ, ಅದರ ನೆಪದಲ್ಲಿ ಜನಜೀವನಕ್ಕೆ ಧಕ್ಕೆಯಾಗಬಾರದು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು. ಮೂಲಭೂತ ಸೌಕರ್ಯಗಳಿಗೆ ಈ ವರದಿ ಜಾರಿಯಿಂದ ತೊಂದರೆಯಾಗಬಾರದು. ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಜನ ಜೀವನಕ್ಕೆ ಧಕ್ಕೆ ಯಾಗವುದಿಲ್ಲ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮಗಳಿಗೆ ಸೀಮಿತವಾಗಿ ಇಟ್ಟಿಗೆ ನಿರ್ಮಾಣಕ್ಕೆ ಕೆಂಪು ಕಲ್ಲು ತೆಗೆಯಲು ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ ಮಾತನಾಡಿ, ಕಸ್ತೂರಿ ರಂಗನ್ ಪರಿಸರ ವಿಜ್ಞಾನಿ ಅಲ್ಲ, ಬಾಹ್ಯಾಕಾಶ ವಿಜ್ಞಾನಿ. ಅವರನ್ನು ಯಾಕೆ ಈ ಕೆಲಸಕ್ಕೆ ನೇಮಕ ಮಾಡಿದರೋ ಗೊತ್ತಿಲ್ಲ. ಇಸ್ರೋ ವಿಜ್ಞಾನಿಯಾಗಿದ್ದರಿಂದ ಅವರು ಸ್ಯಾಟಲೈಟ್ ಸರ್ವೆ ಮಾಡಿ ಅಡಿಕೆ ತೋಟ, ಹೊಲಗ ಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದ್ದಾರೆ ಎಂದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುತ್ತದೆ. ಕೇರಳದವರು ಈ ವಿಷಯವನ್ನು ಗಂಭೀರವಾಗಿ ಪರಿಗ ಣಿಸಿ ಪುನಃ ಸರ್ವೆ ಕಾರ್ಯ ಮಾಡಿದ್ದರಿಂದ ೧೩, ೧೦೮ ಚ. ಕಿ. ಮೀ. ಅಷ್ಟು ಇದ್ದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ೯ ಸಾವಿರ ಚ. ಕಿ. ಮೀಗೆ ಇಳಿಕೆಯಾಗಿದೆ. ನಮ್ಮ ರಾಜ್ಯದಲ್ಲಿಯೂ ಅಂತಹ ಪ್ರಯತ್ನ ನಡೆದಿದ್ದರೆ ೨೦, ೬೦೦ ಚ. ಕಿ. ಮೀ ಇರುವ ಪ್ರದೇಶ ಕನಿಷ್ಠ ೧೩ ಸಾವಿರ ಚ. ಕಿ. ಮೀ. ಗೆ ಇಳಿಕೆಯಾಗಿರುತ್ತಿತ್ತು ಎಂದು ಅವರು ಹೇಳಿದರು. ಕಸ್ತೂರಿ ರಂಗನ್ ವರದಿ ಯಥಾವತ್ತು ಜಾರಿಯಾದರೆ ಈ ಭಾಗದ ಗ್ರಾಮಗಳಲ್ಲಿ ರಕ್ತಪಾತ ಆಗುತ್ತದೆ. ಸರಕಾರ ಹಾಗೂ ಅಧಿಕಾರಿಗಳು ಈ ವಿಷಯದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಹೊಸದಾಗಿ ಸರ್ವೆ ಮಾಡಿಸಬೇಕು ಎಂದು ಅವರು ಆಗ್ರಹಿಸಿದರು.
ಕೇರಳ ಸರ್ಕಾರವು ಪ್ರತಿ ಹಳ್ಳಿಯನ್ನು ಅಧ್ಯಯನ ಮಾಡುವ ಸಲುವಾಗಿ ಸಮಿತಿಯನ್ನು ರಚಿಸಿತ್ತು ಮತ್ತು ವರದಿಯಲ್ಲಿ ಶಿಫಾರಸು ಮಾಡಲಾದ ಇಎಸ್ಎ ವ್ಯಾಪ್ತಿಯನ್ನು ಕಡಿಮೆ ಮಾಡಿತು. ಅಂತಿಮ ಅಧಿಸೂಚನೆಯು ಮಲೆನಾಡು ಪ್ರದೇಶಗಳಲ್ಲಿ ಹಿಂಸಾಚಾರಕ್ಕೂ ಕಾರಣವಾಗಬಹುದು ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು. ಅಂತಿಮ ಅಧಿಸೂಚನೆಯಲ್ಲಿ ತಮ್ಮ ಗ್ರಾಮವನ್ನು ಸೇರಿಸಿದರೆ ಇಎಸ್‌ಎನಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲಾಗುವುದು ಎಂಬ ಆತಂಕವಿದೆ ಎಂದು ಶಾಸಕರು ಸದನದ ಗಮನಸೆಳೆದರು.
ಪಂಚಾಯತಿ ಚುನಾವಣೆಗಳನ್ನು ಬಹಿಷ್ಕರಿಸುವ ಕುರಿತು ಗ್ರಾಮಸ್ಥರ ಎಚ್ಚರಿಕೆ
ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅನೇಕ ಗ್ರಾಮಗಳು ಗ್ರಾಮ ಪಂಚಾಯಿತಿ ಮತದಾನವನ್ನು ಬಹಿಷ್ಕರಿಸುವ ಕುರಿತು ಎಚ್ಚರಿಕೆ ನೀಡಿದ್ದಾರೆ ಎಂದು ಮುಡಿಗರೆ ಶಾಸಕ ಸಂಸದ ಕುಮಾರಸ್ವಾಮಿ ಹೇಳಿದ್ದಾರೆ. ಕಸ್ತುರಿರಂಗನ್ ವರದಿ, ಹುಲಿ ಮೀಸಲು ಮತ್ತು ಪರಿಸರ-ಸೂಕ್ಷ್ಮ ಮತ್ತು ಬಫರ್ ವಲಯಗಳನ್ನು ಗುರುತಿಸುವಂತಹ ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತ ವಿರೋಧಿ ಎಂದು ಮಲೆನಾಡು ಆಕ್ರೋಶ ವ್ಯಕ್ತಪಡಿಸುತ್ತಿದೆ. ಕೊಪ್ಪಾ, ಮುಡಿಗರೆ, ಎನ್ ಆರ್ ಪುರ, ಶೃಂಗೇರಿ ಮತ್ತು ಚಿಕ್ಕಮಗಳೂರಿನ ಕೆಲ ಪ್ರದೇಶಗಳ ನಿವಾಸಿಗಳು ಈ ಯೋಜನೆಗಳನ್ನು ಜಾರಿಗೆ ತಂದರೆ ತಮ್ಮ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಗೊಳಿಸುವ ಕುರಿತು ಡಿಸೆಂಬರ್ 31 ರ ಮೊದಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಅಫಿಡವಿಟ್ ಸಲ್ಲಿಸುವಂತೆ ಸಭೆಗಳು, ಪ್ರತಿಭಟನೆಗಳು, ಬಂದ್ ಗಳು ಮತ್ತು ಆಂದೋಲನಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿವೆ.
Advertisement