ನೂತನ ಅಗ್ನಿ ಸುರಕ್ಷತಾ ನಿಯಮಗಳಿಗೆ ಖಾಸಗಿ ಶಾಲೆಗಳ ವಿರೋಧ 

 ರಾಜ್ಯದಲ್ಲಿನ ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ನೂತನ ಅಗ್ನಿ ಸುರಕ್ಷತಾ ನಿಯಮಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ನೂತನ ಅಗ್ನಿ ಸುರಕ್ಷತಾ ನಿಯಮಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ವೇಳೆಗೆ ಪಾಲಿಸಬೇಕಾದ ನಿಯಮಗಳನ್ನು ಪಟ್ಟಿ ಮಾಡಿ ಇತ್ತೀಚಿಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ಸುತ್ತೋಲೆಗಳನ್ನು ಕಳುಹಿಸಲಾಗಿದೆ.

ನೂತನ ನಿಯಮಗಳ ಪ್ರಕಾರ, ಅಸ್ತಿತ್ವದಲ್ಲಿರುವ ಕಟ್ಟಡಗಳು ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ನಿರ್ದಿಷ್ಟಪಡಿಸಿದ ರಚನಾತ್ಮಕ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಪ್ರತಿ ಐದು ವರ್ಷಕ್ಕೊಮ್ಮೆ ಇಂತಹ ಪ್ರಮಾಣೀಕರಣವನ್ನು ನವೀಕರಿಸಬೇಕಾಗುತ್ತದೆ.  

ಶಿಕ್ಷಣ ಸಂಸ್ಥೆಗಳು ಈ ಮಾನದಂಡಗಳನ್ನು ಪೂರೈಸಿದರೆ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ, ಅನುಸರಣೆ ಪ್ರಮಾಣಪತ್ರ ಮತ್ತು ಸಲಹಾ ಪ್ರಮಾಣಪತ್ರವನ್ನು ಪಡೆದರೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ, ಇದನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನವೀಕರಿಸಬೇಕು.

ಹೊಸ ನಿಯಮಗಳನ್ನುಖಾಸಗಿ ಸಂಸ್ಥೆಗಳು  ಟೀಕಿಸಿವೆ, ಸರ್ಕಾರಿ ಶಾಲೆಗಳನ್ನು ಹೊರಗಿಡುವುದು ಇದರ ಪ್ರಮುಖ ವಿವಾದವಾಗಿದೆ.  ಹೊಸ ನಿಯಮಗಳನ್ನು ಪಾಲಿಸುವುದು ದುಬಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿನ 90% ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಬಜೆಟ್ ಶಾಲೆಗಳಾಗಿವೆ, ಇಲ್ಲಿ ವಾರ್ಷಿಕ ಶುಲ್ಕ 10,000 ರಿಂದ 40,000 ರೂ. ಇರುತ್ತದೆ ಎಂದು ಬಳ್ಳಾರಿಯ ಜವಾಹರ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಹೇಳಿದ್ದಾರೆ.

ಈ ನೂತನ ನಿಯಮಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲು ಶಾಲೆಗಳಿಗೆ ಹೇಗೆ ಸಾಧ್ಯ?ಕೋವಿಡ್- ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುತ್ತಿಲ್ಲ, ಅಥವಾ ಮೊದಲ ಕಂತಿನ ಶುಲ್ಕವನ್ನು ಸಹ ಪಾವತಿಸಲು ಆಗುತ್ತಿಲ್ಲ. ಸರ್ಕಾರ ಆರ್ ಟಿಇ ಶುಲ್ಕವನ್ನು ಮರುಪಾವತಿಸಿಲ್ಲ, ಶಿಕ್ಷಕರು ಅರ್ಧ ಸಂಬಳವನ್ನು ಪಡೆಯಲು ಆಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ನಿಯಮಗಳನ್ನು ಹಿಂಪಡೆಯುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಸಂಯೋಜಿತ ಮ್ಯಾನೇಜ್ ಮೆಂಟ್ ಬಯಸಿದ್ದು, 2017 ಕ್ಕಿಂತ ಮೊದಲು ಸ್ಥಾಪಿಸಲಾದ ಶಾಲೆಗಳಲ್ಲಿ ಸುರಕ್ಷತೆಗಾಗಿ 2018 ರ ನಿಯಮಗಳನ್ನು ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com