ಐಎಂಎ ಹಣ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ಜನವರಿ 3ರವರೆಗೆ ವಿಸ್ತರಣೆ

ವಿಶೇಷ ನ್ಯಾಯಾಲಯದ ಆದೇಶದನ್ವಯ ಐಎಂಎನಲ್ಲಿ ಹಣ ಹೂಡಿರುವವರು ತಮ್ಮ ಹಣ ವಾಪಸ್ ಪಡೆಯುವಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 3 ರ ವರೆಗೆ ವಿಸ್ತರಿಸಲಾಗಿದೆ.
ಐಎಂಎ
ಐಎಂಎ

ಬೆಂಗಳೂರು: ವಿಶೇಷ ನ್ಯಾಯಾಲಯದ ಆದೇಶದನ್ವಯ ಐಎಂಎನಲ್ಲಿ ಹಣ ಹೂಡಿರುವವರು ತಮ್ಮ ಹಣ ವಾಪಸ್ ಪಡೆಯುವಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 3 ರವರೆಗೆ ವಿಸ್ತರಿಸಲಾಗಿದೆ.

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿರುವವರ ಬಳಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಅಥವಾ ಐಎಂಎ ಸಂಸ್ಥೆಯವರು ನೀಡಿರುವ ಗುರುತಿನ ಚೀಟಿ ಇಲ್ಲದೆಯೂ ಸಹ ತಮ್ಮ ಹಣ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

ಸೆಕ್ಷನ್ ೭ (೩) ರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ (೨೦೦೪) ರ ಪ್ರಕಾರ ನಿಗದಿಪಡಿಸಿದ ಕೊನೆಯ ದಿನದ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ನಂತರ ಯಾವುದೇ ಕ್ಲೇಮುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಐಎಂಎ ಪ್ರಕರಣದ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಕುರಿತು ಹೆಚ್ಚಿನ ವಿವರಗಳಿಗೆ ಅರ್ಜಿದಾರರು ಕಾಲ್‌ಸೆಂಟರ್ ಸಂಖ್ಯೆ ೦೮೦-೪೬೮೮೫೯೫೯ ಗೆ ಬೆಳಿಗ್ಗೆ ೮.೦೦ ಗಂಟೆಯಿಂದ ರಾತ್ರಿ ೮.೦೦ ಗಂಟೆ ವರೆಗೆ ಕರೆ ಮಾಡಬಹುದು. ಅಲ್ಲದೆ ವೆಬ್‌ಸೈಟ್ "imaclaims.karnataka.gov.in ಇ ಮೇಲ್ - splocaima20@gmail.com ವಾಟ್ಸ್‌ಆಪ್ ಸಂಖ್ಯೆ: ೭೯೭೫೫೬೮೮೮೦ ಅಥವಾ ಚಾಟ್‌ಬಾಕ್ಸ್ ಲಿಂಕ್ https://ot.v-connect.in/ ಅಥವಾ ಸಮಕ್ಷಮ ಪ್ರಾಧಿಕಾರದ ಕಚೇರಿ, ೨ನೇ ಮಹಡಿ, ಬಿ.ಎಂ.ಟಿ.ಸಿ. ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು-೫೬೦ ೦೨೭ ಇಲ್ಲಿ ಪಡೆಯಬಹುದಾಗಿದೆ ಎಂದು ಐಎಂಎ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com