ಮೂರು ತಿಂಗಳ ಕಾಲ ಯೋಜನೆ ಗಡುವು ವಿಸ್ತರಿಸಿದ ಕೆ-ರೇರಾ!

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ನಿಗದಿತ ಗಡುವು ಅಥವಾ ಮಾರ್ಚ್ 15 ರ ನಂತರ ಪೂರ್ಣಗೊಂಡ ಯೋಜನೆಗಳ ನೋಂದಣಿಗೆ ನೀಡಲಾಗಿದ್ದ ಗಡುವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ನಿಗದಿತ ಗಡುವು ಅಥವಾ ಮಾರ್ಚ್ 15 ರ ನಂತರ ಪೂರ್ಣಗೊಂಡ ಯೋಜನೆಗಳ ನೋಂದಣಿಗೆ ನೀಡಲಾಗಿದ್ದ ಗಡುವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿದೆ. ಈ ಹಿಂದೆ ಮಾರ್ಚ್ ನಲ್ಲಿ ಆರು ತಿಂಗಳ ಕಾಲ ಗಡುವನ್ನು ವಿಸ್ತರಿಸಿತ್ತು.

2016ರ ರಿಯಲ್ ಎಸ್ಟೇಟ್ ( ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ಅದರ ನಿಯಮಗಳ ಅನುಸಾರ ಈ  ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸೆಂಬರ್ 18 ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.ವಿವಿಧ ಕಟ್ಟಡ ಯೋಜನೆಗಳಿಗೆ ಗಡುವು ವಿಭಿನ್ನವಾಗಿರಲಿದೆ. ಅದು ವೈಯಕ್ತಿಕ ಗಡುವನ್ನು ಅವಲಂಬಿಸಿರುತ್ತದೆ. 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಸಲಹೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಬಿಲ್ಡರ್ ಮತ್ತು ಗ್ರಾಹಕರ ಹಿತಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯಲ್ಲಿ ಮಾಡಲಾಗಿದೆ. ನಮ್ಮಲ್ಲಿ 3800 ಯೋಜನೆಗಳು ನೋಂದಣಿಯಾಗಿರುವುದಾಗಿ ಕೆ -ರೇರಾ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಲಾಕ್ ಡೌನ್, ಕಾರ್ಮಿಕರ ಬಿಕ್ಕಟ್ಟು ಮತ್ತು ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಬಿಲ್ಡರ್ ಗಳು ಕಠಿಣ ಸಮಯವನ್ನು ಎದುರಿಸಿದ್ದಾರೆ. ಖರೀದಿದಾರರು ತಾವು ಬಯಸಿದಂತೆ ಮನೆ ಕೊಳ್ಳಲು ನೆರವಾಗಲಿದೆ. ವಿಸ್ತರಣೆಯಿಂದ ಎರಡೂ ಕಡೆಗೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಬಿಡಿಎ ಮತ್ತು ಖಾಸಗಿ ಡೆವಲಪರ್ ಗಳು ಈ ಕ್ರಮವನ್ನು ಪ್ರೋತ್ಸಾಹಿಸಿಲ್ಲ. ಖರೀದಿದಾರರ ಸುರಕ್ಷತೆಗಾಗಿ ಇದನ್ನು ಮಾಡಲಾಗಿದೆ ಎಂದು ನಾಡಪ್ರಭು ಕೆಂಪೇಗೌಡ ಲೇಔಟ್ ಓಪನ್ ಫೋರಂನ ಎ.ಎಸ್. ಸೂರ್ಯಕಿರಣ್ ತಿಳಿಸಿದ್ದಾರೆ.

ಕೇಂದ್ರದ ಸಲಹೆಯ ಪ್ರಕಾರ, ಮೂರು ತಿಂಗಳ ವಿಸ್ತರಣೆಯನ್ನು ರೇರಾ ಕೇಸ್-ಟು-ಕೇಸ್ ಆಧಾರದ ಮೇಲೆ ಮಾತ್ರ ಬಳಸಬೇಕಾಗಿತ್ತು, ಎಲ್ಲರಿಗೂ ಮಾಡಬೇಕಿರಲಿಲ್ಲ ಎಂದು ಫೋರಂ ಫಾರ್ ಫೀಪಲ್ಸ್ ಕಲೆಕ್ಟಿವ್ ಎಪರ್ಟ್ ನ ಎಂಎಸ್ ಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com