ರಾಯಬಾಗ್: ಅಧಿಕಾರಿಗಳ ಬೇಜವ್ದಾರಿಗೆ ರಸ್ತೆ ಮಧ್ಯೆ ವಿದ್ಯುತ್ ಕಂಬ, ಗ್ರಹಚಾರ ಕೆಟ್ರೆ ದೇವರೆಗತಿ!

ಕಂಬಗಳ ಮಧ್ಯ ರಸ್ತೆಯೋ, ಇಲ್ಲ ರಸ್ತೆಗಳ ಮಧ್ಯ ಕಂಬಗಳೊ, ಇದನ್ನು ಕೇಳಿ ಆಶ್ಚರ್ಯ ಆಗುತ್ತಿದಿಯಾ, ಹೌದು ಇದು ಲೋಕೋಪಯೋಗಿ ಅಧಿಕಾರಿಗಳ ಮತ್ತು ಹೆಸ್ಕಾಂ ಅಧಿಕಾರಿಗಳ ಬೇಜವ್ದಾರಿಗೆ ಒಂದು ಅತ್ಯುತ್ತಮ ಉದಾಹರಣೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ರಾಯಬಾಗ್(ಬೆಳಗಾವಿ): ಕಂಬಗಳ ಮಧ್ಯ ರಸ್ತೆಯೋ, ಇಲ್ಲ ರಸ್ತೆಗಳ ಮಧ್ಯ ಕಂಬಗಳೊ, ಇದನ್ನು ಕೇಳಿ ಆಶ್ಚರ್ಯ ಆಗುತ್ತಿದಿಯಾ, ಹೌದು ಇದು ಲೋಕೋಪಯೋಗಿ ಅಧಿಕಾರಿಗಳ ಮತ್ತು ಹೆಸ್ಕಾಂ ಅಧಿಕಾರಿಗಳ ಬೇಜವ್ದಾರಿಗೆ ಒಂದು ಅತ್ಯುತ್ತಮ ಉದಾಹರಣೆ. 

ಹೌದು ರಾಯಬಾಗ ತಾಲೂಕಿನ ನಸಲಾಪೂರ ಗ್ರಾಮದಲ್ಲಿ.  ನೆರೆ ಹಾವಳಿ ಯೋಜನೆಯಡಿ ರಾಯಬಾಗ-ಅಂಕಲಿ ಮುಖ್ಯ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿ ಇದಾಗಿದ್ದು, ರಸ್ತೆ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಗಳು ಈಗ ರಸ್ತೆ ಅಗಲೀಕರಣದಿಂದ ರಸ್ತೆ ಮಧ್ಯ ಬಂದಿವೆ. ನಸಲಾಪೂರ ಗ್ರಾಮದಲ್ಲಿ ರಸ್ತೆ ಅಗಲೀಕರಣದಿಂದ ವಿದ್ಯುತ್ ಕಂಬಗಳು ರಸ್ತೆ ಮಧ್ಯ ಬಂದಿದ್ದು, ಇದರ ಬಗ್ಗೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದರೂ ಸಹಿತ ಅವರು ಹಾರಿಕೆ ಉತ್ತರ ನೀಡುತ್ತ, ಕಂಡು ಕೇಳದಂತೆ ಮೌನಕ್ಕೆ ಶರಣಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
 
ರಸ್ತೆ ಮಧ್ಯೆ ವಿದ್ಯುತ್ ಕಂಬಗಳು ಇರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟೇ ಅಲ್ಲದೇ ಸಮೀಪದಲ್ಲಿ ಸಕ್ಕರೆ ಕಾರಖಾನೆ ಇರುವುದರಿಂದ ನಿತ್ಯ ಈ ಮಾರ್ಗದಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್‍ಗಳು ಓಡಾಡುತ್ತವೆ. ಅವು ಆಕಸ್ಮಿಕ ವಿದ್ಯುತ್ ಕಂಬಕ್ಕೆ ತಾಗಿದರೆ ಭಾರಿ ಅನಾಹುತ ತಪ್ಪಿದ್ದಲ್ಲ. ಇಷ್ಟೇಲ್ಲ ಅಪಾಯಗಳಿದ್ದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲದಂತೆ ವರ್ತಿಸುವುದನ್ನು ನೋಡಿದರೆ ಅವರಿಗೆ ಜನರ ಹಿತಕ್ಕಿಂತ ತಮ್ಮ ಹಿತ ಹೆಚ್ಚಾಗಿರುವುದು ಕಾಣುತ್ತದೆ. ಈಗಾಗಲೇ ಒಂದು ಬದಿಯಲ್ಲಿ ವಿದ್ಯುತ್ ಕಂಬಗಳನ್ನು ನಡುವೆ ಬಿಟ್ಟು ರಸ್ತೆ ಡಾಂಬರೀಕರಣ ಪೂರ್ಣಗೊಳಿಸಿದ್ದು, ಇನ್ನೊಂದು ಬದಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗಿದೆ. ಇತ್ತ ಗುತ್ತಿಗೆದಾರ ಬೇಗ ಬೇಗನೆ ರಸ್ತೆ ಕಾಮಗಾರಿ ಮಾಡಿ, ಬಿಲ್ ತೆಗೆದುಕೊಳ್ಳಲು ತರಾತುರಿ ಮಾಡುತ್ತಿರುವುದು ಕಂಡು ಬರುತ್ತಿದೆ. ರಸ್ತೆ ಕಾಮಗಾರಿ ಕೂಡ ಕಳಪೆ ಮಟ್ಟದ್ದಾಗಿರುವುದಾಗಿ ಗ್ರಾಮಸ್ಥರು ದೂರುತ್ತಿದ್ದಾರೆ. ನೆರೆ ಹಾವಳಿ ಯೋಜನೆಯಡಿ ಅತಿವೃಷ್ಠಿಗೆ ತುತ್ತಾದ ಗ್ರಾಮಗಳ ರಸ್ತೆ ಸುಧಾರಣೆಗೆ ಸರಕಾರ ಕೋಟ್ಯಾಂತರ ರೂ.ಗಳನ್ನು ಮಂಜೂರು ಮಾಡಿದೆ. ಆದರೆ ಸರಕಾರದ ಹಣ ಸದುಪಯೋಗವಾಗುವುದಕ್ಕಿಂತ ಹೆಚ್ಚಾಗಿ ದುರಪಯೋಗವಾಗುತ್ತಿದೆ ಎಂದು ಸಾರ್ವಜನಿಕರ ಮಾತಾಗಿದೆ.

ಒಟ್ನಲಿ ತಾಲೂಕಿನ ಲೋಕೋಪಯೋಗಿ ಅಧಿಕಾರಿಗಳ ಕಾರ್ಯವೈಖರಿ ಕಂಡು ಜನರು ಛೀಮಾರಿ ಹಾಕುತ್ತಿದ್ದಾರೆ. ಇವರು ಮಾಡುವ ಪ್ರತಿಯೊಂದು ರಸ್ತೆ ಕಾಮಗಾರಿಗಳು ಹೇಗಿವೆ ಎಂದರೆ, ರಸ್ತೆ, ವಿಭಜಕ, ವಿದ್ಯುತ್ ದೀಪ ಅಳವಡಿಕೆ ಕಾಮಗಾರಿಗಳನ್ನು ಮಾಡಿ ಬಿಲ್ ತೆಗೆಯುವುದು. ಮರು ವರ್ಷ ಅವುಗಳನ್ನು ಕೆಡುವುದು, ರಸ್ತೆ ಪುನರನಿರ್ಮಾಣ ಮಾಡುವುದು. ಇವರ ಇಖಾಲೆಯಡಿ ಮಾಡುತ್ತಿರುವ ಪ್ರತಿಯೊಂದು ರಸ್ತೆ ಕಳೆಪೆ ಗುಣಮಟ್ಟದಲ್ಲಿದ್ದು, ಗುತ್ತಿಗೆದಾರರೊಂದಿಗೆ ಅಪವಿತ್ರ ಒಳ ಒಪ್ಪಂದದಿಂದ ಸಾರ್ವಜನಿಕರು ಸರಕಾರಕ್ಕೆ ಕಟ್ಟುವ ತೆರೆಗೆ ಹಣ ಪೋಲಾಗುತ್ತಿದೆ ಎಂದರೂ ತಪ್ಪಾಗಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com