ಬೆಂಗಳೂರು: ಅಪ್ರಾಪ್ತ ಸ್ನೇಹಿತನ ಕೊಂದ ಯುವಕ ಅರೆಸ್ಟ್

ಅಪ್ರಾಪ್ತ ವಯಸ್ಕ ಸ್ನೇಹಿತನ ಹತ್ಯೆ ಮಾಡಿದ್ದ  19 ವರ್ಷದ ಯುವಕನನ್ನು ಬೈಯಪ್ಪನಹಳ್ಳಿ ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ  17 ವರ್ಷದ ಅಪ್ರಾಪ್ತನ ಮೃತದೇಹ ಪತ್ತೆಯಾದ ನಂತರ ಸುಮಾರು ಒಂದು ವಾರದ ಬಳಿಕ ಆರೋಪಿಯ ಬಂಧನವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಪ್ರಾಪ್ತ ವಯಸ್ಕ ಸ್ನೇಹಿತನ ಹತ್ಯೆ ಮಾಡಿದ್ದ  19 ವರ್ಷದ ಯುವಕನನ್ನು ಬೈಯಪ್ಪನಹಳ್ಳಿ ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ  17 ವರ್ಷದ ಅಪ್ರಾಪ್ತನ ಮೃತದೇಹ ಪತ್ತೆಯಾದ ನಂತರ ಸುಮಾರು ಒಂದು ವಾರದ ಬಳಿಕ ಆರೋಪಿಯ ಬಂಧನವಾಗಿದೆ.

ಮೃತನನ್ನು  ರವಿತೇಜಾ ಎಂ, (17) ಬನ್ನಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ. ಇನ್ನು ಆರೋಪಿಯನ್ನು ಬೆಂಗಳೂರು  ಗ್ರಾಮೀಣ ಪ್ರದೇಶದ ಚಂದಾಪುರ ನಿವಾಸಿ ರಾಕೇಶ್ ಅಲಿಯಾಸ್ ಡ್ಯಾನಿ  ಎಂದು ಹೇಳಲಾಗಿದೆ.

ಜನವರಿ 31 ರಂದು ಮೈಸೂರು ರೈಲ್ವೆ ಸೇತುವೆ ಬಳಿ ರೈಲ್ವೆ ಹಳಿ ಮೇಲೆ ರವಿತೇಜಾ  ಶವ ಪತ್ತೆಯಾಗಿತ್ತು.. ಆರಂಭದಲ್ಲಿ ಪೊಲೀಸರು ರೈಲು ಅಪಘಾತದಲ್ಲಿ ಸಾವನ್ನಪ್ಪಿರಬಹುದೆಂದು ಶಂಕಿಸಿದ್ದರು. ಆದರೆ ರವಿತೇಜಾ ಅವರ ತಂದೆ ಮಂಜುನಾಥ್ ಎಂಪಿ, ಬಡಗಿ ದೇಹವನ್ನು ಗುರುತಿಸಿ ಕೊಲೆ ಶಂಕೆ ವ್ಯಕ್ತಪಡಿಸಿದ್ದರು.

ಶವಪರೀಕ್ಷೆಯ ವರದಿಯನ್ನು ಸ್ವೀಕರಿಸಿದ ಪೊಲೀಸರು, ರವಿತೇಜಾ ಮೇಲೆ ಮಾರಕ ಆಯುಧಗಳು ಮೊಂಡಾದ ಲೋಹದ ವಸ್ತುವಿನಿಂದ ಹಲ್ಲೆ ನಡೆದಿರುವುದನ್ನು ಕಂಡುಕೊಂಡಿದ್ದಾರೆ.. ನಂತರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ಡ್ಯಾನಿ  ತನಿಖೆ ಕೈಗೊಂಡಿದ್ದಾರೆ.ರವಿತೇಜಾ ಮತ್ತು ಡ್ಯಾನಿ ತಾವು ಕದ್ದ ಮೊಬೈಲ್ ಫೋನ್ ನ ಮಾರಾಟದ ವಿಚಾರದಲ್ಲಿ ಜಗಳವಾಡಿದ್ದರು. ಆ ವೇಳೆ ಡ್ಯಾನಿ ತಾನು ಸೇಡು ತೀರಿಸಿಕೊಳ್ಲಲು ರವಿತೇಜನನ್ನು ಪಾರ್ಟಿಗೆ ಆಹ್ವಾನಿಸಿ ಮಾರಕ ಆಯುಧಗಳಿಂದ ಹಲ್ಲೆ ಮಾಡಿದ್ದಾನೆ.ಅಲ್ಲದೆ ಆತನ ಇಬ್ಬರು ಸ್ನೇಹಿತರು , ರೈಲ್ವೆ ಹಳಿಯ ಮೇಲೆ ಶವ ಎಸೆದಿದ್ದರು.

ರವಿಟೆಜಾ, ಶಾಲೆಯಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದು ಡ್ಯಾನಿ ಹಾಗೂ ಆತ ದಾರಿಹೋಕರ ಮೊಬೈಲ್ ಕಳವು ಮಾಡುತ್ತಿದ್ದರು.ಹಾಗೆ ಕದ್ದ ಫೋನ್ ಮಾರಾಟದ ವಿಷಯಕ್ಕೆ ಇಬ್ಬರಲ್ಲಿ ಜಗಳವಾಗಿತ್ತು. ಆ ವೇಳೆ ರವಿತೇಜಾ ತಂದೆ , ಮಂಜುನಾಥ್ ಡ್ಯಾನಿ ಅವರನ್ನು ತನ್ನ ಮನೆಗೆ ಕರೆದು ಮಗನ ಬಳಿ ಕ್ಷಮೆ ಯಾಚಿಸಲು ಹೇಳಿದ್ದಾರೆ.ಅಲ್ಲದೆ ಇದನ್ನು ದೊಡ್ಡದು ಮಾಡಬೇಡೆಂದು ಕೇಳಿದ್ದರು ಎಂದು ಪೋಲೀಸರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com