ಬೆಳಗಾವಿ: ಕಸದ ರಾಶಿಯಲ್ಲಿ ದೇಶೀ ನಿರ್ಮಿತ ಪಿಸ್ತೂಲ್ ಪತ್ತೆ

ಬೆಳಗಾವಿಯ ಮರ್ಕಾಂಡೆ ನಗರ ಹಾಗೂ ವಘಾವಡೆ ಗ್ರಾಮದ ಮಧ್ಯೆಯಿರುವ ರಸ್ತೆಯ ಕಸದ ರಾಶಿಯಲ್ಲಿ ದೇಶೀ ನಿರ್ಮಿತ ನಾಲ್ಕು ಪಿಸ್ತೂಲ್ ಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೆಳಗಾವಿಯ ಮರ್ಕಾಂಡೆ ನಗರ ಹಾಗೂ ವಘಾವಡೆ ಗ್ರಾಮದ ಮಧ್ಯೆಯಿರುವ ರಸ್ತೆಯ ಕಸದ ರಾಶಿಯಲ್ಲಿ ದೇಶೀ ನಿರ್ಮಿತ ನಾಲ್ಕು ಪಿಸ್ತೂಲ್ ಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. 

ಪಿಸ್ತೂಲ್ ಗಳು ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ವಶಕ್ಕೆ ಪಡೆದರು. ಈ ಪಿಸ್ತೂಲುಗಳು ಪೋರ್ಚುಗೀಸರ ಯುಗದಲ್ಲಿ ಬಳಕೆ ಮಾಡಲಾಗುತ್ತಿದ್ದವುಗಳಂತೆ ಕಾಣುತ್ತಿವೆ ಎಂದು ಹೇಳಲಾಗುತ್ತಿದೆ. 

ಕಸದಲ್ಲಿ ಪಿಸ್ತೂಲುಗಳು ಕಾಣಿಸುತ್ತಿದ್ದಂತೆ ಸ್ಥಳದ ಮಾಲೀಕ ಭವಕಣ್ಣ ಪಾಟೀಲ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಸ್ತೂಲುಗಳು 50-60 ವರ್ಷದ ಹಳೆಯದ್ದಾಗಿದ್ದು, ಎಲ್ಲಾ ನಾಲ್ಕೂ ತುಕ್ಕು ಹಿಡಿದ ಸ್ಥಿತಿಯಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಬೆಳಗಾವಿ ಗ್ರಾಮಾಂತರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ತನಿಖೆ ಪರಿಶೀಲನೆ ನಡೆಸುತ್ತಿದ್ದಾರೆ. 

ಪೋರ್ಚುಗೀಸರ ಯುಗದದಲ್ಲಿ ಗೋವಾದಲ್ಲಿ ಈ ಪಿಸ್ತೂಲುಗಳನ್ನು ಬಳಕೆ ಮಾಡಲಾಗುತ್ತಿತ್ತು. ಕೆಲವರು ಈ ಪಿಸ್ತೂಲುಗಳನ್ನು ತೆಗೆದುಕೊಂಡು ಬಂದಿದ್ದು, ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳ ಭಯದಿಂದ ಭೀತಿಗೊಂಡು ಪಿಸ್ತೂಲುಗಳನ್ನು ಮಣ್ಣಿನಲ್ಲಿ ಹೂತಿರುವ ಸಾಧ್ಯತೆಗಳಿವೆ. ಇಲ್ಲವೇ, ಕೆಲ ಕುಖ್ಯಾತ ವ್ಯಕ್ತಿಗಳು ದರೋಡೆಗೆ ಬಳಕೆ ಮಾಡಿರಬಹುದು. ಬಳಿಕ ಪೊಲೀಸರ ಭಯದಿಂದ ಮಣ್ಣಿನಲ್ಲಿ ಹೂತಿರಬಹುದು. ಪ್ರಕರಣವನ್ನು ನಿರ್ಲಕ್ಷ್ಯದಿಂದ ನೋಡುವಂತಿಲ್ಲ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com