
ಬೆಂಗಳೂರು: ಬಾಡಿಗೆದಾರನೋರ್ವ ಮನೆ ಒಡತಿಯನ್ನು ಕೊಂದು, ಆಕೆಯ ಪತಿ ಹಾಗೂ ಮಗಳ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ನಗರದ ಪೀಣ್ಯ ಸೆಕೆಂಡ್ ಸ್ಟೇಜ್‍ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.
ಆರೋಪಿ ಚಿತ್ರದುರ್ಗ ಮೂಲದ ರಂಗಧಾಮಯ್ಯ ಮೊದಲಿಗೆ ಮನೆ ಒಡತಿ ಲಕ್ಷ್ಮಿ (30)ಯನ್ನು ಕೊಲೆ ಮಾಡಿ, ಬಳಿಕ ಅವರ ಪತಿ ಶಿವರಾಜ್ ಮತ್ತು ಮಗಳು ಚೈತ್ರಾಳ ಮೇಲೆ ಚಾಕುವಿನಿಂದ ಗಂಭೀರ ಹಲ್ಲೆ ಮಾಡಿದ್ದಾನೆ.
Advertisement