ಟರ್ಫ್ ಕ್ಲಬ್ ಬುಕ್ಕಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

ಟರ್ಫ್ ಕ್ಲಬ್ ಬುಕ್ಕಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ 20 ಕಡೆ ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟರ್ಫ್ ಕ್ಲಬ್ ಬುಕ್ಕಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ 20 ಕಡೆ ದಾಳಿ ನಡೆಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 11.30 ರಿಂದ ಬುಕ್ಕಿಗಳ ನಿವಾಸ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಜಿಎಸ್‌ಟಿ ವಂಚನೆ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಟರ್ಫ್‌ ಕ್ಲಬ್‌ನಲ್ಲಿ ಅಧಿಕಾರಿಗಳು ದಾಳಿ‌ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್​​​ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಟರ್ಫ್​ ಕ್ಲಬ್​ ಮೇಲೆ ದಾಳಿ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಿಎಸ್ ಟಿ ವಂಚನೆ ಮಾಡಿರುವ ದೂರು ಬಂದ ಹಿನ್ನೆಲೆ, ಇಂದು ವಾಣಿಜ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ಧಾರೆ. ಅಧಿಕಾರಿಗಳು 20 ತಂಡಗಳಾಗಿ ಬೆಂಗಳೂರಿನ ಟರ್ಫ್​​​​  ಕ್ಲಬ್ ಒಳಗಿನ 20 ಬುಕ್ಕಿ ಸ್ಟಾಲ್​​ಗಳನ್ನು ರೇಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ  20 ಹೆಚ್ಚು ಬುಕ್ಕಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಶೋಧ ನಡೆಸಿದರು.

ಈ ಹಿಂದೆ ಸಿಸಿಬಿ ಅಧಿಕಾರಿಗಳು ಕೂಡ ಟರ್ಫ್​​ ಕ್ಲಬ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕುದುರೆ ರೇಸ್ ನಲ್ಲಿ ಖಾಸಗಿ ಸ್ಟಾಲ್​​ನ ಬುಕ್ಕಿಗಳು ಕೈವಾಡ ಇತ್ತು. ಖಾಸಗಿಯವರಿಗೆ ಸ್ಟಾಲ್ ಹಾಕಲು ಟರ್ಫ್ ಕ್ಲಬ್ ಆಡಳಿತ ಮಂಡಳಿ ಹಣ ಪಡೆಯುತ್ತಿತ್ತು. ಇವರಿಂದ ಸಂಗ್ರಹ ಮಾಡುತ್ತಿದ್ದ ಹಣಕ್ಕೆ ಯಾವುದೇ ತೆರಿಗೆ ಕಟ್ಟದೇ ವಂಚಿಸುತ್ತಿದ್ದರು. ಸಿಸಿಬಿ ಅಧಿಕಾರಿಗಳು ಕೂಡ ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಜಿ ಎಸ್ ಟಿ ವಂಚನೆ ಮಾಡುತ್ತಿರುವ ಬಗ್ಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com