ಮಂಡ್ಯ: ಮಹಾ ಶಿವರಾತ್ರಿ ಜಾಗರಣೆ ಸಂದರ್ಭದಲ್ಲಿ ಡಬ್ಬಲ್ ಮರ್ಡರ್ ನಡೆದಿರುವ ಘಟನೆ ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಕಳೆದ ತಡರಾತ್ರಿ ನಡೆದಿದೆ
ಮಹದೇಶ್ವರಪುರ ಗ್ರಾಮದ ಕೋಳಿ ಸುರೇಶ ಹಾಗೂ ನಾಗರಾಜು ಕೊಲೆಯಾದವರಾಗಿದ್ದು, ಇದೇ ಗ್ರಾಮದ ಕೃಷ್ಣ, ಸುರೇಶ್ ಹಾಗೂ ಸಹಚರರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಮಹದೇಶ್ವರಪುರ ಗ್ರಾಮದ ಕೋಳಿ ಸುರೇಶ ಹಾಗೂ ನಾಗರಾಜು ಅವರನ್ನು ಹಳೇ ದ್ವೇಷದ ಹಿನ್ನಲೆಯಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ
ಇದೇ ಗ್ರಾಮದ ಕೃಷ್ಣ, ಸುರೇಶ್ ಹಾಗೂ ಸಹಚರರಿಂದ ಕೃತ್ಯನಡೆದಿದೆ ಎಂದು ಆರೋಪಿಸಲಾಗಿದ್ದು ಈ ಸಂಬಂಧ ರೌಡಿ ಕೃಷ್ಣನನ್ನು ರಾತ್ರಿಯೇ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿಗಳು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕೊಲೆಗೆ ಪ್ರೇಮ ಪ್ರಕರಣ ಹಾಗೂ ಹಣಕಾಸು ವ್ಯವಹಾರ ಕಾರಣ ಎಂಬ ಶಂಕೆವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿನೀಡಿ, ಪರಿಶೀಲನೆನಡೆಸಿದರು.
ಕೊಲೆಯಾದ ಕೋಳಿ ಸುರೇಶ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದ, ಮತ್ತೋರ್ವ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ,ಕಳೆದ ರಾತ್ರಿ ಗ್ರಾಮದ ದೇವಸ್ಥಾನದದ ಟೀ ಅಂಗಡಿ ಬಳಿ ಜಗಳ ನಡೆದು ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ
ವರದಿ: ನಾಗಯ್ಯ
Advertisement