ಮಂಗಳೂರಿನಲ್ಲಿ ಜಾರ್ಜ್ ಪರ್ನಾಂಡಿಸ್ ಗೌರವಾರ್ಥ ಸ್ಮಾರಕ ನಿರ್ಮಾಣ

ಮಂಗಳೂರು ಮಣ್ಣಿನ ಮಗ ಹಿರಿಯ ರಾಜಕಾರಣಿ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಸ್ಮರಣಾರ್ಥ ಮಂಗಳೂರಿನಲ್ಲಿ  ಸ್ಮಾರಕ ನಿರ್ಮಾಣ ಮಾಡಲಾಗಿದ್ದು ಫೆಬ್ರವರಿ 23 ರಂದು ಉದ್ಘಾಟನೆಗೊಳ್ಳಲಿದೆ.
ರ್ಜ್ ಫರ್ನಾಂಡಿಸ್
ರ್ಜ್ ಫರ್ನಾಂಡಿಸ್
Updated on

ಮಂಗಳೂರು: ಮಂಗಳೂರು ಮಣ್ಣಿನ ಮಗ ಹಿರಿಯ ರಾಜಕಾರಣಿ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಸ್ಮರಣಾರ್ಥ ಮಂಗಳೂರಿನಲ್ಲಿ  ಸ್ಮಾರಕ ನಿರ್ಮಾಣ ಮಾಡಲಾಗಿದ್ದು ಫೆಬ್ರವರಿ 23 ರಂದು ಉದ್ಘಾಟನೆಗೊಳ್ಳಲಿದೆ.

ವಿನ್ಸೆಂಟ್ ಕೌನ್ಸಿಲ್ ಸದಸ್ಯ  ಬೆಜೈ ಪ್ಯಾರಿಷ್ ಪ್ಯಾಸ್ಟೋರಲ್ ಮಾತನಾಡಿ, ಬೇಜಾಯ್ ಚರ್ಚ್ ನಲ್ಲಿ ಜಾರ್ಜ್ ಅವರ ಸ್ಮಾರಕ ಸಿದ್ಧವಾಗಿದ್ದು ಉದ್ಘಾಟನೆಗೆ ತಯಾರಾಗಿದೆ ಎಂದು ಹೇಳಿದ್ದಾರೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ವಿಧಿವಶರಾಗಿದ್ದರು. 88 ವರ್ಷದ ಜಾರ್ಜ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆದಿತ್ತು, ಅಲ್ಲಿಂದ ಚಿತಾಭಸ್ಮ ತಂದು  ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ  ಮಾಡಲಾಗಿದೆ. 

ಭಾನುವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನಾ ಉದ್ಘಾಟಿಸಲಿದ್ದಾರ,  ಮಂಗಳೂರು ಶಾಸಕ ವೇದವ್ಯಾಸ್ ಕಾಮತ್, ಎಂಎಲ್ ಸಿ ಐವಾನ್ ಜಡಿಸೋಜಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com