ಕೊಪ್ಪಳ: ಜಿ.ಪಂ.ಅಧ್ಯಕ್ಷರ ವಿರುದ್ಧ ಸ್ವಪಕ್ಷೀಯ ಸದಸ್ಯರಿಂದಲೇ ಗಂಭೀರ ದೂರು

ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ಸ್ವಪಕ್ಷೀಯ ಕಾಂಗ್ರೆಸ್ಸಿನ 16 ಜನ ಜಿಲ್ಲಾ ಪಂಚಾಯಿತಿ ಸದಸ್ಯರು ಸಿಇಒ ರಘುನಂದನ್ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದು, ಶಾಸನ ಬದ್ಧ ಅನುದಾನ ದುರುಪಯೋಗದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ದೂರು
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ದೂರು

ಗಂಗಾವತಿ: ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ವಿರುದ್ಧ ಸ್ವಪಕ್ಷೀಯ ಕಾಂಗ್ರೆಸ್ಸಿನ 16 ಜನ ಜಿಲ್ಲಾ ಪಂಚಾಯಿತಿ ಸದಸ್ಯರು ಸಿಇಒ ರಘುನಂದನ್ ಮೂರ್ತಿ ಅವರಿಗೆ ದೂರು ಸಲ್ಲಿಸಿದ್ದು, ಶಾಸನ ಬದ್ಧ ಅನುದಾನ ದುರುಪಯೋಗದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯ ಹೇರೂರು ಕ್ಷೇತ್ರದ ಸದಸ್ಯ ಅಮರೇಶ ಗೋನಾಳ್ ನೇತೃತ್ವದಲ್ಲಿ ತೆರಳಿದ ಸದಸ್ಯರು, ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದು, ಮನವಿಯಲ್ಲಿ ಶಾಸನ ಬದ್ಧ ಅನುದಾನ ಪೈಕಿ 103.87 ಲಕ್ಷ ರೂಪಾಯಿ ಕಾಮಗಾರಿ ಬೋಗಸ್ ಆಗಿದೆ ಎಂದು ದೂರಿದ್ದಾರೆ. 

ಬೋಗಸ್ ಬಿಲ್ ಮಾಡಿ ಹಣ ಎತ್ತುವಳಿ ಉದ್ದೇಶಕ್ಕೆ ಅಧ್ಯಕ್ಷ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಕೂಡಲೆ ಒಂದು ತನಿಖಾ ತಂಡ ರಚಿಸಬೇಕು, ಕೈಗೊಳ್ಳಲಾದ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿ 18 ಕಾಮಗಾರಿಗಳ ಪಟ್ಟಿಯನ್ನೂ ಸಲ್ಲಿಸಿದ್ದಾರೆ. 

ಅಧಿಕಾರ ಹಂಚಿಕೆಯ ಒಪ್ಪಂದದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಫೆ.10ರಂದು ವಿಶ್ವನಾಥ ರೆಡ್ಡಿ ರಾಜೀನಾಮೆ ನೀಡಬೇಕಿತ್ತು. ಆದರೆ ಪಕ್ಷದ ವರೀಷ್ಠರ ಸೂಚನೆ ಮಧ್ಯೆಯೂ ವಿಶ್ವನಾಥ ರೆಡ್ಡಿ ಕಾಲಹರಣ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸದಸ್ಯರು ಈ ದೂರಿನ ಮೂಲಕ ಮಣಿಸಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವ ವಿಶ್ವನಾಥ ರೆಡ್ಡಿ ವಿರುದ್ಧ ಕಾಂಗ್ರೆಸ್ ಪಕ್ಷದ 16 ಸದಸ್ಯರು, ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಎತ್ತುವಳಿ ಮಾಡಿರುವ ಗಂಭೀರ ಸ್ವರೂಪದ ದೂರಿನ ಮನವಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಘುನಂದನ್ ಮೂರ್ತಿ ಅವರಿಗೆ ಸಲ್ಲಿಸಿದರು.

ವರದಿ: ಎಂಜೆ. ಶ್ರೀನಿವಾಸ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com