ಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಹನೂರು ತಾಲೂಕಿನ ಕಾಡೊಳಗಿನ ಗ್ರಾಮ ಪಚ್ಚೆದೊಡ್ಡಿಯ 18 ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ನಡೆದು ಶಾಲೆಗೆ ತೆರಳುತ್ತಿದ್ದರು. ಕಳೆದ ಫೆ. 10 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಮಾಡಿದ್ದ ವೇಳೆ ಈ ವಿಚಾರ ಅವರ ಗಮನಕ್ಕೆ ಬಂದಿತ್ತು. 
ಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಕಾಡು ಹಾದಿಯಲ್ಲಿ ವನ್ಯಜೀವಿಗಳ ಭಯದಿಂದಲೇ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆಯಾಗಿದೆ.

ಹನೂರು ತಾಲೂಕಿನ ಕಾಡೊಳಗಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಫೆಬ್ರವರಿ 10 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಮಾಡಿದ್ದರು. ಆ ವೇಳೆ ಗ್ರಾಮದಿಂದ ಇನ್ನಿತರೆ ಗ್ರಾಮಗಳ ಶಾಲೆಗೆ ತೆರಳಲು ವಾಹನ ವ್ಯವಸ್ಥೆಯಿಲ್ಲದೆ ಕಾಡಿನೊಳಗೆ ಪ್ರಾಣಿಗಳ ಭಯದಿಂದಲೇ 18 ಮಕ್ಕಳು ನಡೆದುಕೊಂಡು ತೆರಳುವುದು ಗಮನಕ್ಕೆ ಬಂದು ಅರಣ್ಯ ಇಲಾಖೆಯ ವಾಹನ ಕಲ್ಪಿಸುವ ಭರವಸೆ ನೀಡಿ, ಅಧಿಕಾರಿಗಳಿಗೆ ವಾಹನ ಕಲ್ಪಿಸುವಂತೆ ಸೂಚಿಸಿದ್ದರು.

ಅದರಂತೆ, ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ಇಂದಿನಿಂದ ಶಾಲೆಗೆ ತೆರಳಲು ತಾತ್ಕಾಲಿಕ ವಾಹನ ವ್ಯವಸ್ಥೆ ಮಾಡಿದ್ದು, ಮುಂದಿನ ತಿಂಗಳಿಂದ ಅರಣ್ಯ ಇಲಾಖೆಯ 16 ಆಸನದ ಜೀಪನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ, ಸಂಜೆ 4.30 ಕ್ಕೆ ಹಾಗೂ 5.30 ಕ್ಕೆ ಸಮಯ ನಿಗದಿಗೊಳಿಸಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಕಾರ್ಯ ಆರಂಭವಾಗಿದ್ದು, ಸಚಿವರು ಗ್ರಾಮಸ್ಥರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.

ವರದಿ :-ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com